ಜಿಲ್ಲೆ

ತೆರೆದ ಶೌಚಗೃಹ ಗುಂಡಿಗೆ ಬಲಿಯಾದ 3 ವರ್ಷದ ಬಾಲಕ; ಪತಿಯೊಂದಿಗೆ ಹೋಗಿದ್ದಾನೆ ಎಂದುಕೊಂಡಿದ್ದ ತಾಯಿಗೆ ಶಾಕ್

Haveri

ಹಾವೇರಿ: ಆಟವಾಡಲು ತೆರಳಿದ್ದ 3 ವರ್ಷದ ಬಾಲಕ ನಿರ್ಮಾಣ ಹಂತದಲ್ಲಿದ್ದ ನೀರು ತುಂಬಿದ ಶೌಚಗೃಹದ ಗುಂಡಿಯಲ್ಲಿ ಬಿದ್ದು ಮೃತಪಟ್ಟ ಘಟನೆ ಜಿಲ್ಲೆಯ ಸವಣೂರ ತಾಲೂಕಿನ ಚಿಕ್ಕಮರಳಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸುದರ್ಶನ ನೀಲಪ್ಪ ಓಲೇಕಾರ ಮೃತಪಟ್ಟ ಬಾಲಕ.
ಮೃತ ಬಾಲಕ ತಂದೆಯೊಂದಿಗೆ ಹೋಗಿದ್ದಾನೆ ಎಂದುಕೊಂಡು ತಾಯಿ ಪಂಚಮಿ ಹಬ್ಬದ ತಯಾರಿಯಲ್ಲಿ ಮುಳುಗಿದ್ದಳು. ಬಳಿಕ ಬಾಲಕನ ತಂದೆ ನೀಲಪ್ಪ ಮನೆಗೆ ಆಗಮಿಸಿದ ವೇಳೆ ಬಾಲಕನ ತಾಯಿ ವಿಚಾರಿಸಿದಾಗ, ಸುದರ್ಶನ ತನ್ನೊಂದಿಗೆ ಬಂದಿಲ್ಲ ಮನೆ ಹೊರಗೆ ಆಟವಾಡುತ್ತಿದ್ದ ಎಂದು ಪತ್ನಿಗೆ ತಿಳಿಸಿದ್ದಾನೆ.
ಆಗ ಆತಂಕಕ್ಕೆ ಒಳಗಾದ ಸುದರ್ಶನ ತಂದೆ-ತಾಯಿ ಶೋಧ ನಡೆಸಿದ್ದಾರೆ. ಕೆಲ ಸಮಯದ ನಂತರ ಗುಂಡಿಯಲ್ಲಿ ಬಿದ್ದಿದ್ದ ಬಾಲಕನ ಮೃತದೇಹ ಮೇಲಕ್ಕೆ ಬಂದಿದೆ. ಕೂಡಲೆ ಬಾಲಕನನ್ನು ಹೊಸರಿತ್ತಿಯ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ದಿದ್ದಾರೆ. ಆದರೆ, ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ಹೇಳಿ ವಾಪಸ್ ಕಳುಹಿಸಿದ್ದಾರೆ. ಈ ಕುರಿತು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.