ಪಾಂಡವಪುರ: ಪಟ್ಟಣದ ಪಿಎಲ್‌ಡಿ ಬ್ಯಾಂಕ್‌ನ ನೂತನ ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ 99 ವರ್ಷದ ಚಿಕ್ಕಮರಳಿ ಪೂಜಾರಿ ಎಂ.ಚನ್ನಯ್ಯ ಶನಿವಾರ ಅವಿರೋಧವಾಗಿ ಆಯ್ಕೆಯಾದರು.
ಹಿಂದಿನ ಉಪಾಧ್ಯಕ್ಷೆ ಗೌರಮ್ಮ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಎಂ.ಚನ್ನಯ್ಯ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ನಿರ್ಮಲಾ ಅವರೊಧ ಆಯ್ಕೆ ಘೋಷಿಸಿದರು.
ಚನ್ನಯ್ಯ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿಹಂಚಿ ಸಂಭ್ರಮಿಸಿದರು. ಬಳಿಕ ಅವರನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸೇರಿದಂತೆ ಹಲವರು ಅಭಿನಂದಿಸಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಚನ್ನಯ್ಯ ಅವರು ಇಳಿ ವಯಸ್ಸಿನಲ್ಲೂ ಸಾಕಷ್ಟು ಉತ್ಸಾಹದಿಂದ ಕೆಲಸ ಮಾಡುತ್ತಿದ್ದು, ಇವರ ಅಧಿಕಾರವಧಿಯಲ್ಲಿ ಬ್ಯಾಂಕ್ ಅಭಿವೃದ್ಧಿಗೆ ಹೊಂದಲಿ ಎಂದು ಹಾರೈಸಿದರು.
ಟಿಎಪಿಸಿಎಂಎಸ್ ನಿರ್ದೇಶಕ ರಾಮಕೃಷ್ಣೇಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎನ್.ಮುರಳಿ, ನಿರ್ದೇಶಕರಾದ ಸಿ.ಪ್ರಕಾಶ್, ರತ್ನಮ್ಮ, ಡಿ.ಎನ್.ಸೋಮಶೇಖರ್, ಶಿವಣ್ಣ, ನಾಗಶೆಟ್ಟಿ, ಗೌರಮ್ಮ, ನಾಗೇಗೌಡ, ಕಾರ್ಯದರ್ಶಿ ಹುಚ್ಚೇಗೌಡ, ಮುಖಂಡರಾದ ಹೇಮಣ್ಣ, ಚಿಕ್ಕಮರಳಿ ರಮೇಶ್, ಚಂದ್ರಶೇಖರ್ ಇತರರು ಇದ್ದರು.