ಎನ್.ಆರ್.ಪುರ: ಸ್ವಾತಂತ್ರೃ ಹೋರಾಟದ ಸಮಯದಲ್ಲಿ ಗಣಪತಿ ಉತ್ಸವ ಬಳಸಿಕೊಂಡು ಜನರನ್ನು ಒಗ್ಗೂಡಿಸಲಾಗಿತ್ತು ಎಂದು ಬಸ್ತಿಮಠದ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ತಿಳಿಸಿದರು.
ಸುಂಕದಕಟ್ಟೆ ಯುವಕ ಸಂಘ ಆಯೋಜಿಸಿದ್ದ 21ನೇ ಗಣೇಶೋತ್ಸವದಲ್ಲಿ ಸುಂಕದಕಟ್ಟೆ ದಷ್ಟಿಕಲ್ಲು ಮಾರಿ ಗದ್ದುಗೆ ಸಮುದಾಯ ಭವನ ಉದ್ಘಾಟನೆ, ಸಾಧಕರಿಗೆ ಸನ್ಮಾನ, ಶಿವಧೂತ ಗುಳಿಗ ನಾಟಕ ಪ್ರದರ್ಶನದಲ್ಲಿ ಆಶೀರ್ವಚನ ನೀಡಿದರು. ಗಣೇಶ ದೇವರಾಗಿ, ಮಿತ್ರರಾಗಿ, ಸಾತ್ವಿಕ ಸಮಾಜ ಸಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ ಎಂದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಸುಂಕದಕಟ್ಟೆ ಯುವಕ ಸಂಘದವರು ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ಶಂಗೇರಿ ಕ್ಷೇತ್ರದ ಅಭಿವದ್ಧಿಗೆ ಕೆಲಸ ಮಾಡುತ್ತಿದ್ದೇನೆ. ಸುಂಕದಕಟ್ಟೆಯಲ್ಲಿ ದಷ್ಟಿಕಲ್ಲು ಮಾರಿ ಗದ್ದುಗೆ ಸಮುದಾಯ ಭವನಕ್ಕೆ 25 ಲಕ್ಷ ರೂಪಾಯಿ ನೀಡಿದ್ದೇನೆ. ಬಸ್ತಿಮಠದ ಶ್ರೀಗಳ ಸಾನ್ನಿಧ್ಯದಲ್ಲಿ ಉದ್ಘಾಟಿಸಿದ್ದೇನೆ ಎಂದರು.
ವಿವಿಧ ಕ್ಷೇತ್ರಗಳ ಸಾಧಕರಾದ ಡಾ. ಮೇರಿ ಸೂಸನ್ನ, ಈಜುತಜ್ಞ ಈಶ್ವರ ಮಲ್ಪೆ, ಕಲಾವಿದೆ ರೂಪಾ ಅವರನ್ನು ಸನ್ಮಾನಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯಿಂದ ಆಗಮಿಸಿದ್ದ ಕಲಾ ತಂಡದವರು ವಿಜಯಕುಮಾರ್ ಕೋಡಿಯಾರ್‌ಬೈಲ್ ನಿರ್ದೇಶನದಲ್ಲಿ 846 ನೇ ಸಂಚಿಕೆಯ ಶಿವಧೂತ ಗುಳಿಗ ಎಂದ ಪೌರಾಣಿಕ ನಾಟಕ ನಡೆಸಿಕೊಟ್ಟರು. 3 ಸಾವಿರಕ್ಕೂ ಅಧಿಕ ಜನರು ನಾಟಕ ವೀಕ್ಷಣೆ ಮಾಡಿದರು.
ಜಿಪಂ ಮಾಜಿ ಸದಸ್ಯ ಪಿ.ಆರ್.ಸದಾಶಿವ, ಪಪಂ ಮಾಜಿ ಸದಸ್ಯರಾದ ಮುಕುಂದ, ಸೋಜಾ, ವಿನಾಯಕ ವೆಲ್ಡಿಂಗ್ ವರ್ಕ್ಸ್ ಮಾಲೀಕ ಕಷ್ಣಯ್ಯ ಆಚಾರ್, ಸುಂಕದಕಟ್ಟೆ ಯುವಕ ಸಂಘದ ಅಧ್ಯಕ್ಷ ಎನ್.ಎಸ್.ಸುಮಂತ್, ವಿ. ಶ್ರೇಯಾ ಇತರರಿದ್ದರು.