ಬಾಳೆಹೊನ್ನೂರಿನ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸ್ನೇಹಾ ಶಾನುವಳ್ಳಿ ಅವರನ್ನು ಸನ್ಮಾನಿಸಲಾಯಿತು. ಎಂ.ಎಸ್.ಚನ್ನಕೇಶವ್, ಚಂದ್ರಮ್ಮ, ಎಂ.ಜೆ.ಮಹೇಶ್, ಶಬನಾ ಅಂಜುಮ್, ಮನುಕುಮಾರ್, ಮಹಮ್ಮದ್ ಹನ್ೀ ಇತರರಿದ್ದರು. 
ಚಿಕ್ಕಮಗಳೂರು

ಸ್ಪರ್ಧೆಯಲ್ಲಿ ಗುರಿ ಮುಟ್ಟುವ ಛಲ ಮುಖ್ಯ Determination to reach the goal

ಬಾಳೆಹೊನ್ನೂರು: ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಗುರಿ ಮುಟ್ಟುವ ಛಲವಿರಬೇಕು ಎಂದು ಏಷ್ಯನ್ ಗೇಮ್ಸ್‌ನ ಕಂಚಿನ ಪದಕ ವಿಜೇತೆ ಎಸ್.ಎಸ್.ಸ್ನೇಹಾ ಶಾನುವಳ್ಳಿ ಹೇಳಿದರು.

ಸರ್ಕಾರಿ ಪ್ರೌಢಶಾಲೆ ಆತಿಥ್ಯದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ 14-17ರ ವಯೋಮಿತಿಯ ಅಥ್ಲೆಟಿಕ್ಸ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಸ್ಪರ್ಧಿಸಿ ಗೆಲುವಿನ ಗುರಿ ಮುಟ್ಟುವ ಛಲ ಇಟ್ಟುಕೊಂಡಿರಬೇಕು. ಸ್ಪರ್ಧೆಗಳಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಭಾಗವಹಿಸುವುದೇ ಮುಖ್ಯ ಎಂಬುದನ್ನು ತಿಳಿದುಕೊಂಡಿರಬೇಕು. ಇಂದು ಗೆಲುವು ಸಾಧಿಸದಿದ್ದರೂ ಮುಂದೊಂದು ದಿನ ಗೆಲುವು ಸಾಧಿಸುವುದು ಖಚಿತವಾಗಲಿದೆ. ಬಹುಮಾನ ಗೆದ್ದವರು ಬೀಗದೆ ಮುಂದಿನ ಸಾಧನೆ ಕಡೆಗೆ ಗಮನಹರಿಸಬೇಕು. ನಾನು ಸಹ ಇಲ್ಲಿನ ವಿದ್ಯಾರ್ಥಿಗಳ ರೀತಿಯಲ್ಲಿಯೇ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರಿಂದ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.

ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಚನ್ನಕೇಶವ್ ಮಾತನಾಡಿ, ಬಾಳೆಹೊನ್ನೂರಿನಲ್ಲಿ ಉತ್ತಮ ರೀತಿಯಲ್ಲಿ ವ್ಯವಸ್ಥಿತವಾಗಿ ಕ್ರೀಡಾಕೂಟ ಆಯೋಜನೆ ಮಾಡಿದ್ದು, ಸ್ಪರ್ಧಿಗಳು ಕ್ರೀಡಾಸ್ಫೂರ್ತಿಯಿಂದ ಭಾಗವಹಿಸಿ ಬಹುಮಾನ ಪಡೆಯಬೇಕು ಎಂದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಬಾಳೆಹೊನ್ನೂರಿನಲ್ಲಿ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಗಳನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿದೆ. ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಿದ್ದು, ದೈಹಿಕ, ಮಾನಸಿಕ ಸ್ಥಿರತೆ ಕಾಪಾಡಿಕೊಳ್ಳಲು ಸಹಕರಿಸುತ್ತದೆ ಎಂದರು.

ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಸ್ನೇಹಾ, ದಕ್ಷಿಣ ವಲಯ ಹ್ಯಾಮರ್ ಥ್ರೋನಲ್ಲಿ ಚಿನ್ನದ ಪದಕ ಪಡೆದ ಸಾಲೀಮ್ ಅವರನ್ನು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸನ್ಮಾನಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಎಂ.ಜೆ.ಮಹೇಶ್ ಆಚಾರ್ಯ, ಡಿಡಿಪಿಐ ಸಿದ್ದರಾಜು, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷೆ ಚಂದ್ರಮ್ಮ, ಬಿಇಒ ಶಬನಾ ಅಂಜುಮ್, ಪ್ರಮುಖರಾದ ಜ್ಞಾನಮೂರ್ತಿ, ಮಹಮ್ಮದ್ ಹನ್ೀ, ಎಂ.ಎಸ್.ಜಯಪ್ರಕಾಶ್, ಎಂ.ಎಸ್.ಅರುಣೇಶ್, ಹಿರಿಯಣ್ಣ, ಸನತ್ ಶೆಟ್ಟಿ, ಯೋಗೀಶ್ ಗೌಡ, ಇಬ್ರಾಹಿಂ ಶಾಫಿ, ಒ.ಡಿ.ಸ್ಟೀನ್, ಮನುಕುಮಾರ್, ಕೆ.ಎಸ್.ಚನ್ನಗಿರಿ, ಎಚ್.ಎಸ್.ಕೌಶಿಕ್ ಪಟೇಲ್, ಚನ್ನಕೇಶವ ಬರಗಲ್, ಡಾ. ಪ್ರೀತಮ್, ಕೊಟ್ರೇಶಪ್ಪ, ಲಿಲ್ಲಿ ಪಾಯ್ಸ ಇತರರಿದ್ದರು.