ಕಡೂರಲ್ಲಿ ಏರ್ಪಡಿಸಿದ್ದ ಶರಣರ ಬೆಳದಿಂಗಳು ಕಾರ್ಯಕ್ರಮವನ್ನು ಸಿ.ಎನ್.ಶೇಖರಪ್ಪ ಉದ್ಘಾಟಿಸಿದರು. ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಕೆ.ಎನ್.ಬೊಮ್ಮಣ್ಣ, ವಿರೂಪಾಕ್ಷಪ್ಪ ಮತ್ತಿತರರಿದ್ದರು. 
ಚಿಕ್ಕಮಗಳೂರು

ಶ್ರೀ ಶಿವಕುಮಾರ ಸ್ವಾಮೀಜಿ ಎಲ್ಲರಿಗೂ ಆದರ್ಶ

ಶ್ರೀ ಶಿವಕುಮಾರ ಸ್ವಾಮೀಜಿ

ಕಡೂರು: ನುಡಿಯನ್ನು ನಡೆಯಾಗಿಸಿಕೊಂಡವರು ಶ್ರೀ ಶಿವಕುಮಾರ ಸ್ವಾಮೀಜಿ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಸಿ.ಎನ್.ಶೇಖರಪ್ಪ ಹೇಳಿದರು.

ಪಟ್ಟಣದ ಯಳನಡು ಮಹಾಸಂಸ್ಥಾನ ಮಠದ ಆವರಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಮತ್ತು ಕದಳಿ ಮಹಿಳಾ ವೇದಿಕೆ ಏರ್ಪಡಿಸಿದ್ದ ಶರಣರ ಬೆಳದಿಂಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತರಳಬಾಳು ಜಗದ್ಗುರು ಪೀಠದ 20ನೇ ಜಗದ್ಗುರು ಶ್ರೀ ಶಿವಕುಮಾರ ಸ್ವಾಮೀಜಿ ಬಸವತತ್ವವನ್ನೇ ತಮ್ಮ ಉಸಿರಾಗಿಸಿಕೊಂಡು ಸಮಾಜದ ಸಂಘಟನೆ, ಮಠಗಳ ಏಕೀಕರಣಕ್ಕೆ ಶ್ರಮಿಸಿದ್ದಾರೆ ಎಂದರು.

ಸಿರಿಗೆರೆಯ ದುಗ್ಗಾಣಿ ಮಠವನ್ನು ದುಡಿಯುವ ಮಠವನ್ನಾಗಿಸಿದ ಕೀರ್ತಿ ಶ್ರೀ ಶಿವಕುಮಾರ ಸ್ವಾಮೀಜಿಗಳವರದ್ದು. ಓದು, ದುಡಿಮೆ, ಊಟ ಪ್ರತಿಯೊಬ್ಬರ ನಿತ್ಯ ಕಾಯಕವಾಗಬೇಕು ಎಂದು ಭಕ್ತರನ್ನು ಎಚ್ಚರಿಸುತ್ತಿದ್ದರು ಎಂದರು.

ಸಾನ್ನಿಧ್ಯ ವಹಿಸಿದ್ದ ಶ್ರೀಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಪೂಜ್ಯರ ಸಾಧನೆ ಶ್ಲಾಘನೀಯ. ಅವರು ಬಸವ ತತ್ವದಂತೆ ನುಡಿದವರು ಮತ್ತು ನಡೆದವರು. ಬಸವಣ್ಣನವರ ವಚನಗಳು ಅವರ ಬದುಕಿನ ಅವಿಭಾಜ್ಯ ಅಂಗವಾಗಿತ್ತು. ಅವರೆಂದೂ ಜಾತಿ ಭೇದ ಮಾಡಿದವರಲ್ಲ ಎಂದು ತಿಳಿಸಿದರು.

ವಕೀಲ ಕೆ.ಎನ್.ಬೊಮ್ಮಣ್ಣ ಶ್ರೀ ಶಿವಕುಮಾರ ಸ್ವಾಮೀಜಿ ಕುರಿತು ಉಪನ್ಯಾಸ ನೀಡಿದರು. ಕಸಾಪ ಗೌರವಾಧ್ಯಕ್ಷ ಕೆ.ಬಿ. ಬಸವರಾಜಪ್ಪ, ಅಧ್ಯಕ್ಷ ಕೆ.ವಿರೂಪಾಕ್ಷಪ್ಪ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಜಾತಾ ಜಡೆಮಲ್ಲಪ್ಪ, ಎಚ್.ಎಂ.ನಂದಕುಮಾರ್, ಯಗಟಿಪುರ ಪ್ರಸನ್ನ, ಎಲ್.ವಿ.ಸದಾಶಿವು, ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಎಂ.ಆರ್.ಪ್ರಕಾಶ, ಅಣ್ಣಿಗೆರೆ ಕುಮಾರಪ್ಪ, ಎಸ್.ಬಿ.ರಾಜಣ್ಣ, ಉಮಾ ಬಸವರಾಜ್, ವೀಣಾ ಈಶ್ವರಪ್ಪ, ರೋಹಿಣಿ, ಶೈಲಶಿವಣ್ಣ, ಕಂಕನಾಡು ಕುಮಾರಸ್ವಾಮಿ, ಕಾಶೀನಾಥ್, ಮುದ್ದೇನಹಳ್ಳಿ ಆನಂದ, ಉಮಾ ಮಹೇಶ್, ಶಿವಲಿಂಗಪ್ಪ ಮತ್ತಿತರರಿದ್ದರು.