ಶೃಂಗೇರಿ ಶಂಕರಗಿರಿಯಲ್ಲಿ ಆಯೋಜಿಸಿದ್ದ ಶ್ರೀ ಶಾಂಕರ ವೈಭವಮ್ ಕಾರ್ಯಕ್ರಮದಲ್ಲಿ ಭಾಗ್ಯಾ, ಆಶಾ, ವಿದ್ಯಾ, ಸುಮಾ, ಕೃಷ್ಣಮೂರ್ತಿ, ಅನಿತಾ, ಮನೋನ್ಮಣಿ, ವಿಶ್ವಾಸ್ ಹಾಗೂ ವಿಶ್ವನಾಥ್ ಇದ್ದರು. 
ಚಿಕ್ಕಮಗಳೂರು

ಶ್ರೀ ಶಂಕರಾಚಾರ್ಯರ ತತ್ವ ಎಲ್ಲರನ್ನೂ ತಲುಪಲಿ (Sringeri Sharada Peetham)

Sringeri Sharada Peetham

ಶೃಂಗೇರಿ: ಶ್ರೀ ಶಂಕರಾಚಾರ್ಯರ ಲೋಕಾನುಗ್ರಹ ತತ್ವ ಸರ್ವರನ್ನೂ ತಲುಪಬೇಕೆಂಬ ಆಶಯದಿಂದ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರು ಶ್ರೀ ಶಂಕರ ತತ್ವ ಪ್ರಸಾರ ಅಭಿಯಾನ ಪ್ರಾರಂಭಿಸಿದ್ದಾರೆ ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

ಶಂಕರಗಿರಿಯಲ್ಲಿ ಮಂಗಳವಾರ ಶಾಂಕರ ತತ್ವ ಪ್ರಸಾರ ಅಭಿಯಾನ ಆಯೋಜಿಸಿದ್ದ ಶಾಂಕರ ವೈಭವಮ್ ಜಿಲ್ಲಾ ಮಟ್ಟದ ಸ್ಪರ್ಧಾ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು.

ಸಮಸ್ತ ವೇದಶಾಸಗಳು, ಗೀತೆಗಳು ಯಾವ ತತ್ವವನ್ನು ಉಪದೇಶ ಮಾಡಿವೆಯೋ ಅದನ್ನು ಕಲಿಯುಗದಲ್ಲಿ ಭಗವಂತನ ಸ್ವರೂಪಿ

ಶ್ರೀ ಶಂಕರ ಭಗವತ್ಪಾದರು ಉಪದೇಶಿಸಿದ್ದಾರೆ. ಶ್ರೀ ಶಂಕರರು ಪ್ರತಿಪಾದಿಸಿದ ತತ್ವವನ್ನು ಶಾಂಕರ ತತ್ವ ಎಂದು ಕರೆಯಲಾಗುತ್ತಿದೆ. ಅದು ಪ್ರತ್ಯೇಕ ತತ್ವವಲ್ಲ. ಅನಾದಿ ಕಾಲದಿಂದ ಋಷಿ ಪರಂಪರೆ ಬರೆದ ಗ್ರಂಥಗಳ ಮೌಲ್ಯಗಳು, ಉಪನಿಷತ್ತಿನ ಸಾರ ಸಂದೇಶಗಳನ್ನು ಶ್ರೀ ಶಂಕರರು ಜಗತ್ತಿಗೆ ಬೋಧಿಸಿದ್ದಾರೆ. ಇದನ್ನು ಹೊಸದಾಗಿ ಪ್ರಾರಂಭ ಮಾಡಿದ್ದೇವೆ. ನಮ್ಮದು ಒಂದು ತತ್ವವಿರಲಿ ಎಂಬ ಅಭಿಲಾಷೆಯಿಂದ ತತ್ವವನ್ನು ಶ್ರೀ ಆಚಾರ್ಯರು ಪ್ರಾರಂಭಿಸಲಿಲ್ಲ. ಸರ್ವರೂ ಉತ್ಕೃಷ್ಟ ಮಾರ್ಗದಲ್ಲಿ ಮುನ್ನಡೆದು ಜೀವನ ಸಾರ್ಥಕ್ಯಗೊಳಿಸಬೇಕೆಂಬ ಆಶಯದಿಂದ ಪರಿಮೂಡಿದ ತತ್ವವಿದು ಎಂದು ಹೇಳಿದರು.

ಅಭಿಯಾನದ ರಾಜ್ಯ ಸಂಚಾಲಕ ತೇಜಶಂಕರ ಸೋಮಯಾಜಿ, ಜಿಲ್ಲಾಧ್ಯಕ್ಷ ರಾಮಪ್ರಸಾದ್, ಜಿಲ್ಲಾ ಸಂಚಾಲಕ ಸದಾಶಿವ ಭಟ್, ವಿವಿಧ ತಾಲೂಕಿನ ಸಂಚಾಲಕರಾದ ಶ್ರೀಧರ್ ರಾವ್ ಅಣ್ಣುಕೊಡಿಗೆ, ಶ್ರೀರವಿ ಪಟವರ್ಧನ್, ಶ್ರೀನಾಥ್, ನಾಗಭೂಷಣ್, ಸತೀಶ್, ನಾಗರಾಜ್, ಅನೂಪ್ ಇದ್ದರು.