ಶೃಂಗೇರಿ ತಾಲೂಕು ಕಚೇರಿ ಎದುರು ಬಿಜೆಪಿ ಮಂಡಲದಿಂದ ಪ್ರತಿಭಟನೆ ನಡೆಸಲಾಯಿತು. ಪ್ರಸನ್ನ ಬೇಗಾನೆ, ರಾಘವೇಂದ್ರ ಹಂಚಲಿ, ಕೆ.ಡಿ.ಸುರೇಶ್, ಪ್ರದೀಪ್, ರತ್ನಾಕರ್, ಶೈಲಾ, ಯೋಗಪ್ಪ ಇತರರಿದ್ದರು. 
ಚಿಕ್ಕಮಗಳೂರು

ಶಾಶ್ವತ ಪರಿಹಾರ ಕಂಡುಕೊಳ್ಳಿ Find a permanent solution

Former Town Panchayat President Harish V. Shetty alleged that although many farmers and laborers have lost their lives due to wild elephants in the Sringeri region, the government is hesitating to provide a permanent solution.

ಶೃಂಗೇರಿ: ಶೃಂಗೇರಿ ಕ್ಷೇತ್ರದಲ್ಲಿ ಕಾಡಾನೆಗಳಿಂದ ಬಹಳಷ್ಟು ರೈತರು ಮತ್ತು ಕೂಲಿಕಾರ್ಮಿಕರು ಜೀವ ಕಳೆದುಕೊಂಡಿದ್ದರೂ ಸರ್ಕಾರ ಶಾಶ್ವತ ಪರಿಹಾರಕ್ಕೆ ಮೀನಮೇಷ ಎಣಿಸುತ್ತಿದೆ ಎಂದು ಪಪಂ ಮಾಜಿ ಅಧ್ಯಕ್ಷ ಹರೀಶ್ ವಿ. ಶೆಟ್ಟಿ ಆರೋಪಿಸಿದರು.

ತಾಲೂಕು ಕಚೇರಿ ಎದುರು ಬುಧವಾರ ಬಿಜೆಪಿ ಮಂಡಲ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಹಾಸನ ಜಿಲ್ಲೆಯ ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವುದು ಅಪಾಯಕಾರಿ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ತಲಗಾರು ಉಮೇಶ್ ಮಾತನಾಡಿ, ಸರ್ಕಾರ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದೆ. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಸಲ್ ಬಿಮಾ ಯೋಜನೆಯನ್ನು ರೈತರು ನಂಬಿಕೊಂಡಿದ್ದರು. ಗ್ರಾಮಲೆಕ್ಕಿಗರು ಮಾಡಿದ ತಪ್ಪಿನಿಂದ ಬೆಟ್ಟಗೆರೆ, ಉಳ್ಳುವಳ್ಳಿ ಇತರ ಗ್ರಾಮಗಳಲ್ಲಿ ಇನ್ನೂ ಬೆಳೆ ಸರ್ವೇ ಆಗಿಲ್ಲ. ಅಲ್ಲಿರುವ ರೈತರು ವಿಮೆ ಪಾವತಿಸಿದ್ದರೂ ವಿಮೆಯ ಹಣ ಸಂದಾಯವಾಗಿಲ್ಲ. ಅದನ್ನು ಕೂಡಲೇ ಸರಿಪಡಿಸಬೇಕು ಹಾಗೂ ಇದಕ್ಕೆ ಕಾರಣರಾದ ಗ್ರಾಮಲೆಕ್ಕಿಗರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ಮನವಿ ಪತ್ರವನ್ನು ಕಂದಾಯ ಅಧಿಕಾರಿ ಪ್ರವೀಣ್‌ಕುಮಾರ್‌ಗೆ ಸಲ್ಲಿಸಿದರು. ಪ್ರಧಾನ ಕಾರ್ಯದರ್ಶಿ ನೂತನ್‌ಕುಮಾರ್, ಬಿ.ಶಿವಶಂಕರ್, ಮೇಗಳಬೈಲು ರಾಜೇಶ್, ದಿನೇಶ್ ಅಂಗುರ್ಡಿ, ಪ್ರವೀಣ್, ಗೇರುಬೈಲು ಶಂಕರಪ್ಪ ಇತರರಿದ್ದರು.