ಬಾಳೆಹೊನ್ನೂರಿನ ವಿಜಯಮಾತೆ ಚರ್ಚ್‌ನ ವಾರ್ಷಿಕೋತ್ಸವದ ಅಂಗವಾಗಿ ಕ್ರೈಸ್ತರು ಬಾಳೆಹೊನ್ನೂರಿನಲ್ಲಿ ಮೊಂಬತ್ತಿ ಹಿಡಿದು ದೇವರ ಸ್ತುತಿಯೊಂದಿಗೆ ಸಡಗರ, ಸಂಭ್ರಮದಿಂದ ಮೆರವಣಿಗೆ ನಡೆಸಿದರು. 
ಚಿಕ್ಕಮಗಳೂರು

ವಿಶ್ವಶಾಂತಿ, ಮಳೆ ಬೆಳೆಗಾಗಿ ಪ್ರಾರ್ಥನೆ

ಮಳೆ ಬೆಳೆಗಾಗಿ ಪ್ರಾರ್ಥನೆ

ಬಾಳೆಹೊನ್ನೂರು: ಪಟ್ಟಣದ ವಿಜಯಮಾತೆ ಚರ್ಚ್‌ನ 92ನೇ ವಾರ್ಷಿಕೋತ್ಸವ ಬುಧವಾರ ಸಡಗರ, ಸಂಭ್ರಮದಿಂದ ನಡೆಯಿತು.

ಚರ್ಚ್ ವಾರ್ಷಿಕೋತ್ಸವದ ಅಂಗವಾಗಿ ಮೊದಲ ದಿನ ದಿವ್ಯ ಬಲಿಪೂಜೆಯು 40ಕ್ಕೂ ಅಧಿಕ ವಿವಿಧ ಚರ್ಚ್‌ಗಳ ಧರ್ಮಗುರುಗಳ ನೇತೃತ್ವದಲ್ಲಿ ನಡೆಯಿತು. ನಂತರ ಪಟ್ಟಣದ ಮುಖ್ಯರಸ್ತೆಯಲ್ಲಿ ವಿಜಯಮಾತೆಯ ಉತ್ಸವಮೂರ್ತಿಯನ್ನು ಹೊತ್ತ ಅಲಂಕೃತ ವಾಹನದೊಂದಿಗೆ ಸುಮಾರು 2 ಸಾವಿರಕ್ಕೂ ಅಧಿಕ ಕ್ರೈಸ್ತರು ಮೊಂಬತ್ತಿಯನ್ನು ಹಿಡಿದು ದೇವರ ಸ್ತುತಿಯೊಂದಿಗೆ ವಿಜೃಂಭಣೆಯ ಮೆರವಣಿಗೆ ನಡೆಸಿದರು. ಧರ್ಮಗುರುಗಳು ವಿಶ್ವಶಾಂತಿ, ಆರೋಗ್ಯ, ಮಳೆ ಬೆಳೆಗಾಗಿ ಪ್ರಾರ್ಥಿಸಿದರು.

ವಾರ್ಷಿಕೋತ್ಸವದ ಅಂಗವಾಗಿ ಚರ್ಚಿನ ಮುಂಭಾಗದಲ್ಲಿ ಕ್ರೈಸ್ತರು ಸೇರಿದಂತೆ ವಿವಿಧ ಧರ್ಮದವರು ಮೇಣದ ಬತ್ತಿ ಹಚ್ಚಿ ಪ್ರಾರ್ಥಿಸಿದರು. ಆಕರ್ಷಕ ಸಿಡಿಮದ್ದು ಪ್ರದರ್ಶನ ಹಾಗೂ ಚರ್ಚ್‌ಗೆ ಮಾಡಿದ ವಿಶೇಷ ವಿದ್ಯುತ್ ದೀಪಾಲಂಕಾರ ನೋಡುಗರ ಗಮನ ಸೆಳೆಯಿತು.