ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವವನ್ನು ದೇವಕಿ ರಾಜಾರಾಮ್ ಉದ್ಘಾಟಿಸಿದರು. ಡಾ. ಸಂಪತ್ ಬೆಟ್ಟಗೆರೆ, ಪ್ರದೀಪ್ ಸಾಲಿಯಾನ, ಪೂರ್ಣೇಶ್ ಮತ್ತಾವರ, ನಯನ ತಳವಾರ, ನಾರಾಯಣ ಗೌಡ, ರಾಮೇಗೌಡ, ಮಂಜುನಾಥ್, ಪುಷ್ಪಾ ಇತರರಿದ್ದರು. 
ಚಿಕ್ಕಮಗಳೂರು

ವಲಸೆ ಕಾರ್ಮಿಕರಿಗೆ ಕನ್ನಡ ಕಲಿಸಿ Kannada Rajyotsava

Mudigere: Writer Dr. Sampath Bettagere stated that Kannadigas should understand that Kannada is not merely a language of communication but also a language of introspection, and that they should teach the language to migrant workers as well.

ಮೂಡಿಗೆರೆ: ಕನ್ನಡ ಬಳಕೆಯ ಭಾಷೆ ಮಾತ್ರವಲ್ಲ ಆತ್ಮಾವಲೋಕನದ ಭಾಷೆ ಎಂಬುದನ್ನು ಕನ್ನಡಿಗರು ಅರ್ಥಮಾಡಿಕೊಂಡು ವಲಸೆ ಕಾರ್ಮಿಕರಿಗೂ ಕನ್ನಡ ಕಲಿಸಬೇಕು ಎಂದು ಸಾಹಿತಿ ಡಾ. ಸಂಪತ್ ಬೆಟ್ಟಗೆರೆ ತಿಳಿಸಿದರು.

ಕುಂದೂರಿನಲ್ಲಿ ಕನ್ನಡ ಸಾಹಿತ್ಯ ಬಳಗದಿಂದ ಭಾನುವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ರಾಜ್ಯದಲ್ಲಿ ಏಕರೂಪದ ಶಿಕ್ಷಣ ಜಾರಿಗೊಳಿಸಬೇಕು. ಇಂಥ ಕಾಯ್ದೆ ಜಾರಿಯಾದರೆ ಕನ್ನಡ ಉಳಿಯಲು ಸಾಧ್ಯ. ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೇಡ ಎಂದು ಕೆಲವು ಸಾಹಿತಿಗಳು ಅಭಿಪ್ರಾಯವನ್ನು ಆಗಾಗ ವ್ಯಕ್ತಪಡಿಸುತ್ತಾರೆ. ಇಂಥ ಧೋರಣೆಯಿಂದಾಗಿ ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿಗೆ ತಲುಪಿವೆ. ಸರ್ಕಾರಿ ಶಾಲೆಗಳ ಕಟ್ಟಡಗಳು ಕುಸಿಯುತ್ತಿದ್ದರೂ ಅದರ ಬಗ್ಗೆ ಆಡಳಿತ ವರ್ಗ ಗಮನಹರಿಸುತ್ತಿಲ್ಲ ಎಂದರು.

ಜನ ಹಳ್ಳಿಯನ್ನು ತೊರೆದು ಪಟ್ಟಣಗಳಲ್ಲಿ ಬಾಡಿಗೆ ಮನೆ ಮಾಡಿಕೊಳ್ಳುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಕನ್ನಡ ಭಾಷೆ ಚಾಲ್ತಿಯಲ್ಲಿದೆ. ಇಂಗ್ಲಿಷ್ ಮಾತನಾಡುವವರು ಹಳ್ಳಿಗಳಲ್ಲಿ ಸಿಗಲಾರರು. ನಗರ ಪ್ರದೇಶಕ್ಕೆ ವಲಸೆ ಹೋದವರು ಕೂಡ ಆಂಗ್ಲ ಮಾಧ್ಯಮದತ್ತ ಮುಖ ಮಾಡುತ್ತಿರುವುದರಿಂದ ನಗರ ಪ್ರದೇಶದಲ್ಲಿ ಎಲ್ಲ ಶಾಲೆಗಳು ಆಂಗ್ಲಮಯವಾಗಿವೆ ಎಂದು ತಿಳಿಸಿದರು.

ಉದಯೋನ್ಮುಖ ಕವಿಗಳಿಂದ ಕವಿಗೋಷ್ಠಿ ನಡೆಯಿತು. ಪ್ರದೀಪ್ ಸಾಲಿಯಾನ, ಪೂರ್ಣೇಶ್ ಮತ್ತಾವರ, ನಯನ ತಳವಾರ, ನಾರಾಯಣ ಗೌಡ, ರಾಮೇಗೌಡ, ಮಂಜುನಾಥ್, ಪುಷ್ಪಾ ಪ್ರಸನ್ನ, ಕೆ.ವಿ.ರಾಜಶೇಖರ್, ಪ್ರಸನ್ನ ತಳವಾರ, ಕೀರ್ತಿ ದರ್ಶನ್, ಕಾವ್ಯಾ ಹರೀಶ್, ಚಂದ್ರೇಗೌಡ ಇತರರಿದ್ದರು.