ಎನ್.ಆರ್.ಪುರದಲ್ಲಿ ಆಯೊಜಿಸಿದ್ದ ಕಾರ್ಯಕ್ರಮದಲ್ಲಿ ಪಿ.ವಿ.ಸೌಮ್ಯಾ ಅವರನ್ನು ಸನ್ಮಾನಿಸಲಾಯಿತು. ವಿದ್ಯಾನಂದಕುಮಾರ್, ಶಿವಕುಮಾರ್, ಕೆ.ಪಿ.ಮನೋಜ್‌ಕುಮಾರ್, ಅಭಿಷೇಕ್ ಇದ್ದರು. 
ಚಿಕ್ಕಮಗಳೂರು

ರಾಜ್ಯದ ಅಭಿವೃದ್ಧಿಗೆ ವಿಶ್ವೇಶ್ವರಯ್ಯ ಕೊಡುಗೆ (Contribution of Visvesvaraya)

ವಿಶ್ವೇಶ್ವರಯ್ಯ

ಎನ್.ಆರ್.ಪುರ: ಸರ್.ಎಂ ವಿಶ್ವೇಶ್ವರಯ್ಯ ಅವರು ಮೈಸೂರು ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದರು ಎಂದು ಸರ್ಕಾರಿ ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಟಿ.ಎಂ.ಶಿವಕುಮಾರ್ ತಿಳಿಸಿದರು.

ಪಟ್ಟಣದ ರೋಟರಿ ಕ್ಲಬ್ ಆಶ್ರಯದಲ್ಲಿ ಇಂಜಿನಿಯರ್ಸ್ ಡೇ ಅಂಗವಾಗಿ ಸರ್.ಎಂ ವಿಶ್ವೇಶ್ವರಯ್ಯ ಅವರು ಮಾತನಾಡಿ, ವಿಶ್ವೇಶ್ವರಯ್ಯ ಅವರು ಮೈಸೂರು ರಾಜ್ಯದ ದಿವಾನರಾಗಿ ಹಲವು ಯೋಜನೆಗಳನ್ನು ರೂಪಿಸಿದರು. ಭದ್ರಾವತಿಯಲ್ಲಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಮೈಸೂರು ಪೇಪರ್ ಮಿಲ್, ಮೈಸೂರಿನಲ್ಲಿ ಗಂಧದ ಎಣ್ಣೆ ಕಾರ್ಖಾನೆ, ಮಹಾರಾಣಿ ಕಾಲೇಜು, ಮೈಸೂರು ವಿಶ್ವವಿದ್ಯಾಲಯ ಹಾಗೂ ಮೈಸೂರು ಬ್ಯಾಂಕಿನ ಸ್ಥಾಪನೆಗೆ ಕಾರಣಕರ್ತರಾಗಿದ್ದರು ಎಂದರು.

ಸಿವಿಲ್ ಇಂಜಿನಿಯರ್ ಪಿ.ವಿ.ಸೌಮ್ಯ ಅವರನ್ನು ರೋಟರಿ ಸಂಸ್ಥೆಯಿಂದ ಸನ್ಮಾನಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷ ಪಿ.ಎಸ್.ವಿದ್ಯಾನಂದಕುಮಾರ್, ಕಾರ್ಯದರ್ಶಿ ಕೆ.ಪಿ.ಮನೋಜ್ ಕುಮಾರ್, ಖಜಾಂಚಿ ಅಭಿಷೇಕ್, ಪಿ.ಆರ್.ಸುಕುಮಾರ್, ಕೆ.ಆರ್.ರಜತ್, ಎಚ್.ಡಿ.ವಿನಯ್, ಎಸ್.ಟಿ.ಗೌಡ, ಡಾ.ಸುರೇಶ್ ಕುಮಾರ್ ಇದ್ದರು.