ಶೃಂಗೇರಿ ಕುರುಬಕೇರಿ ಸರ್ಕಲ್‌ನಲ್ಲಿ ಜೆಡಿಎಸ್, ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ವಿಜಯೇಂದ್ರ, ಭರತ್, ಮಂಜುನಾಥ್, ಭರತ್ ಇತರರಿದ್ದರು. 
ಚಿಕ್ಕಮಗಳೂರು

ಮುಂಬರುವ ಚುನಾವಣೆಗಳಿಗೆ ದಿಕ್ಸೂಚಿ Upcoming Elections

ಶೃಂಗೇರಿ: ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟವು ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕುರುಬಕೇರಿ ಸರ್ಕಲ್ ಬಳಿ ಮಂಗಳವಾರ ಮೈತ್ರಿಕೂಟದಿಂದ ವಿಜಯೋತ್ಸವ ಆಚರಿಸಲಾಯಿತು.

ಬಿಜೆಪಿ ಮಂಡಲ ಅಧ್ಯಕ್ಷ ತಲಗಾರು ಉಮೇಶ್ ಮಾತನಾಡಿ, ವಿಧಾನಪರಿಷತ್ತಿನಲ್ಲಿ ಎರಡೂ ಪಕ್ಷಗಳು ಒಗ್ಗೂಡಿ ನಾಲ್ಕು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು ಮುಂಬರುವ ಚುನಾವಣೆಯ ಗೆಲುವಿಗೆ ಮುನ್ನಡಿ ಬರೆದಿದೆ. ಮೈತ್ರಿಕೂಟ ಮುಂದಿನ ಚುನಾವಣೆಗಳಲ್ಲಿ ಸಮನ್ವಯತೆ ಹಾಗೂ ಸಾಂಘಿಕಭಾವದಿಂದ ಕಾರ್ಯನಿರ್ವಹಿಸಬೇಕು ಎಂದರು.

ಜೆಡಿಎಸ್ ಮುಖಂಡ ಜಿ.ಜಿ.ಮಂಜುನಾಥ್ ಮಾತನಾಡಿ, ಇಂದಿನ ಗೆಲುವು ಮೈತ್ರಿಕೂಟಕ್ಕೆ ಸಂದ ಜಯವಾಗಿದ್ದು, ಮುಂದೆ ತಾಪಂ, ಜಿಪಂ ಚುನಾವಣೆ ಬರಲಿದೆ. ಮುಂದೆ ಬರುವ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಗ್ಗೂಡಿ ಕಾರ್ಯಕರ್ತರ ಜತೆಗೂಡಿ ಕೆಲಸ ಮಾಡುತ್ತವೆ. ಬಿಜೆಪಿ ಹಾಗೂ ಜೆಡಿಎಸ್ ಸಂಘಟನಾ ಮನೋಭಾವದಿಂದ ನಾಲ್ಕು ಸ್ಥಾನ ಗಳಿಸಿವೆ ಎಂದರು.

ಪಪಂ ಮಾಜಿ ಅಧ್ಯಕ್ಷ ಹರೀಶ್ ವಿ. ಶೆಟ್ಟಿ, ತಾಲೂಕು ಜೆಡಿಎಸ್ ಅಧ್ಯಕ್ಷ ಭರತ್ ಗಿಣಕಲ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ವೇಣುಗೋಪಾಲ್, ಮುಖಂಡರಾದ ಕಚ್ಚೋಡಿ ರಮೇಶ್, ವಿಜಯೇಂದ್ರ ಇತರರಿದ್ದರು.