ಬನ್ನಿ ಮುಡಿಯುವ ಸ್ಥಳಕ್ಕೆ ಶ್ರೀ ಮಹಂತ ದೇಶೀಕೇಂದ್ರ ಸ್ವಾಮೀಜಿ, ಶ್ರೀ ಚನ್ನವೀರದೇಶೀಕೇಂದ್ರ ಸ್ವಾಮೀಜಿ, ಕಿರಿಯ ಅಭಿನವ ಸ್ವಾಮೀಜಿ ಆಗಮಿಸಿದರು. 
ಚಿಕ್ಕಮಗಳೂರು

ಮಲ್ಲಿಕಾರ್ಜುನ ಸ್ವಾಮಿಯ ಅದ್ದೂರಿ ದಸರಾ (Dasara)

Dasara

ಶಿಕಾರಿಪುರ: ಸಮೀಪದ ತೊಗರ್ಸಿಯಲ್ಲಿ ಮಳೆ ಹಿರೇಮಠ ಹಿರಿಯ ಶ್ರೀ ಮಹಂತ ದೇಶೀಕೇಂದ್ರ ಸ್ವಾಮೀಜಿ, ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶೀಕೇಂದ್ರ ಸ್ವಾಮೀಜಿ, ಕಿರಿಯ ಶ್ರೀ ಅಭಿನವ ಮಹಂತ ದೇಶೀಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಅದ್ದೂರಿ ದಸರಾ ಮಹೋತ್ಸವ ಜರುಗಿತು.

ಒಂಬತ್ತು ದಿನಗಳ ಕಾಲ ಪ್ರತಿದಿನ ರಾತ್ರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಪಲ್ಲಕ್ಕಿ ಉತ್ಸವವು ರಾಜಬೀದಿಯಲ್ಲಿ ಸಂಚರಿಸಿ ನಿಗದಿತ ಸ್ಥಳಕ್ಕೆ ಆಗಮಿಸಿ ಸಾಂಪ್ರದಾಯಿಕ ಧಾರ್ಮಿಕ ಕಾರ್ಯಗಳು ನಡೆದವು. ಮಂಗಳವಾರ ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ರುದ್ರಾಭಿಷೇಕ ಮತ್ತು ವಿಶೇಷ ಪೂಜೆ ಪುನಸ್ಕಾರ ನಡೆದವು. ಇಡೀ ಗ್ರಾಮವನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಬೇರೆ ಜಿಲ್ಲೆ, ತಾಲೂಕುಗಳಿಂದ ಆಗಮಿಸಿದ್ದ ಭಕ್ತರು ಬನ್ನಿ ಮುಡಿಯುವ ಉತ್ಸವಕ್ಕೆ ಸಾಕ್ಷಿಯಾದರು.

ದೇವಾಲಯದಿಂದ ಕವಲಿ ಗಡಿಯಲ್ಲಿರುವ ಬನ್ನಿ ಮುಡಿಯುವ ಸ್ಥಳಕ್ಕೆ ಮೊದಲು ಶ್ರೀ ಮಲ್ಲಿಕಾರ್ಜುನ ಸ್ವಾಮಿ ಪಲ್ಲಕ್ಕಿ ಸಾಗಿತು. ನಂತರ ಮೂವರು ಮಠಾಧೀಶರು ಸಾರೋಟಿನಲ್ಲಿ ವಿವಿಧ ರೀತಿಯ ವಾದ್ಯಗಳ ಜತೆಗೆ ಬನ್ನಿ ಮುಡಿಯುವ ಸ್ಥಳಕ್ಕೆ ಆಗಮಿಸಿದರು. ನೂರಾರು ಜನರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡರು.

ಮಳೆಹಿರೇಮಠದ ಹಿರಿಯ ಶ್ರೀಗಳಾದ ಮಹಂತ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ನಮ್ಮ ಸಂಸ್ಕೃತಿ, ಸಂಸ್ಕಾರ, ಪರಂಪರೆ ಮತ್ತು ಆಚಾರ ವಿಚಾರಗಳು ಪೂರ್ವಜನರು ಬಿಟ್ಟುಹೋದ ಬಳುವಳಿ. ಇವುಗಳನ್ನು ಮುಂದಿನ ತಲೆಮಾರಿಗೆ ತಲುಪಿಸಬೇಕು. ಸ್ವಾಮಿಯ ಅನುಗ್ರಹದಿಂದ ಕಾಲಕಾಲಕ್ಕೆ ಮಳೆ, ಬೆಳೆಯಾಗಿ ನಾಡು ಸಮೃದ್ಧಿಯಾಗಲಿ ಎಂದರು.