ಶೃಂಗೇರಿಯ ಶಾರದಾ ಕಂರ್ಟ್‌ನಿಂದ ಡಾ. ವಿ.ಆರ್.ಗೌರಿಶಂಕರ್ ಸಭಾಂಗಣದವರೆಗೆ ಸಾಗಿಬಂದ ಮೆರವಣಿಗೆಯಲ್ಲಿ ಏಷ್ಯನ್ ಗೇಮ್ಸ್‌ನ ಕಂಚಿನ ಪದಕ ವಿಜೇತೆ ಶಾನುವಳ್ಳಿ ಸ್ನೇಹಾ, ಪಾಲಕರಾದ ಸತ್ಯನಾರಾಯಣ್, ಶಾಲಿನಿ ಇದ್ದರು. 
ಚಿಕ್ಕಮಗಳೂರು

ಮಕ್ಕಳು ಶಿಕ್ಷಣದೊಂದಿಗೆ ಕ್ರೀಡಾಸಕ್ತಿ ಬೆಳೆಸಿಕೊಳ್ಳಲಿ Asian Games

Bronze Medal

ಶೃಂಗೇರಿ: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆ ಬಗ್ಗೆಯೂ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ಉನ್ನತ ಗುರಿ ಇರಬೇಕು. ಜೀವನದಲ್ಲಿ ನಾವು ಸೋಲನ್ನು ಒಪ್ಪಿಕೊಂಡಾಗ ಗೆಲುವು ನಮ್ಮದಾಗುತ್ತದೆ ಎಂದು ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಪಡೆದ ಸ್ನೇಹಾ ತಿಳಿಸಿದರು.

ಸ್ನೇಹಾ ಅಭಿನಂದನಾ ಸಮಿತಿ ಡಾ. ವಿ.ಆರ್.ಗೌರಿಶಂಕರ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಯಾವುದೇ ಕೆಲಸದಲ್ಲಿ ಶ್ರದ್ಧೆ ಇರಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ. ಕಷ್ಟ ಎದುರಿಸಿದಾಗ ಮಾತ್ರ ಜೀವನದಲ್ಲಿ ಸುಖ ಕಾಣಲು ಸಾಧ್ಯ. ಮಕ್ಕಳು ಮೊಬೈಲ್‌ನಲ್ಲಿ ಬರುವ ಉತ್ತಮ ಮೌಲ್ಯಗಳ ಕುರಿತು ಚಿಂತನೆ ಮಾಡಬೇಕು. ಮಕ್ಕಳ ಆಸಕ್ತಿಗೆ ಪಾಲಕರು ಪ್ರೋತ್ಸಾಹ ನೀಡಿದಾಗ ಮಾತ್ರ ಅವರ ಆತ್ಮವಿಶ್ವಾಸ ಹೆಚ್ಚಾಗಲು ಸಾಧ್ಯ ಎಂದರು.

ವಿಜ್ಞಾನ ಶಿಕ್ಷಕ ಎಸ್.ಗುರುಮೂರ್ತಿ ಮಾತನಾಡಿ, ಗ್ರಾಮೀಣ ಪ್ರದೇಶದ ಪ್ರತಿಭೆ ಸ್ನೇಹಾ ಸಾಧನೆಗೆ ದೃಢ ನಿಶ್ಚಯ ಕಾರಣ. ಪಾಲಕರು ಮಕ್ಕಳಿಗೆ ಕಷ್ಟದ ಅನುಭವ ಕಲಿಸಿದಾಗ ಮಾತ್ರ ಅವರಿಗೆ ಜೀವನದಲ್ಲಿ ಯಶಸ್ಸು ದೊರೆಯಲು ಸಾಧ್ಯ. ಯುವಪೀಳಿಗೆ ಕ್ರೀಡೆ ಕುರಿತು ಆಸಕ್ತಿ ಬೆಳೆಸಿಕೊಂಡರೆ ಪಾಲಕರು ಅವರಿಗೆ ಉತ್ತೇಜನ ನೀಡಬೇಕು ಎಂದರು.

ರಾಜ್ಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಸಿದ್ಧರಾಜು ಅವರನ್ನು ಗೌರವಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ದತ್ತಾತ್ರೇಯ ವಿ. ಯಾಜಿ, ಉಪತಹಸೀಲ್ದಾರ್ ಪ್ರವೀಣ್‌ಕುಮಾರ್, ಸಮಿತಿ ಪದಾಧಿಕಾರಿಗಳಾದ ಸಂತೋಷ್ ಕಾಳ್ಯ, ರಮೇಶ್ ಭಟ್, ಕಚ್ಚೋಡಿ ರಮೇಶ್, ಜಿಪಂ ಮಾಜಿ ಸದಸ್ಯೆ ಶಿಲ್ಪಾ ರವಿ ಇತರರಿದ್ದರು.