ಬಾಳೆಹೊನ್ನೂರಿನ ದುರ್ಗಾದೇವಿ ನವರಾತ್ರಿ ಮಹೋತ್ಸವ ಅಂಗವಾಗಿ ದುರ್ಗಾ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು. 
ಚಿಕ್ಕಮಗಳೂರು

ದುರ್ಗಾದೇವಿ ಸನ್ನಿಧಿಯಲ್ಲಿ ಅಕ್ಷರಾಭ್ಯಾಸ Aksharabhyasa

ಬಾಳೆಹೊನ್ನೂರು: ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಹದಿನೇಳನೇ ವರ್ಷದ ದುರ್ಗಾದೇವಿ ನವರಾತ್ರಿ ಮಹೋತ್ಸವದಲ್ಲಿ ಶುಕ್ರವಾರ ದುರ್ಗಾ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು.

ನವರಾತ್ರಿ ಆರನೇ ದಿನ ದುರ್ಗೆಯು ವಿಷ್ಣುರೂಪಿಣಿಯಾಗಿ, ಇಂದ್ರಾಣಿಯಾಗಿ ದೇವತೆಗಳಿಗೆ ದರ್ಶನ ನೀಡಿದ ದಿನವೆಂದು ಪುರಾಣದಲ್ಲಿ ಉಲ್ಲೇಖವಿದ್ದು, ಈ ದಿನ ಸರಸ್ವತಿ ಪೂಜಾ ದಿನವಾಗಿರುವುದದರಿಂದ ಪುಟ್ಟ ಮಕ್ಕಳಿಗೆ ಪ್ರಥಮವಾಗಿ ಅಕ್ಷರಾಭ್ಯಾಸ ಮಾಡಿಸಿದಲ್ಲಿ ಆ ಮಕ್ಕಳು ಸಿದ್ಧಿ-ಬುದ್ಧಿವಂತರಾಗಿ, ವಿದ್ಯಾಸಂಪನ್ನರಾಗಿ ಉತ್ತಮ ವ್ಯಕ್ತಿಗಳಾಗುತ್ತಾರೆಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಅಕ್ಷರಾಭ್ಯಾಸ ಮಾಡಿಸಲಾಯಿತು. ಅಕ್ಷರಾಭ್ಯಾಸದ ಪ್ರಯುಕ್ತ ದೇವಿಯನ್ನು ಶಾರದಾ ಮಾತೆ ರೂಪದಲ್ಲಿ ವಿಶೇಷ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಮೃಗವಾಹಿನಿ, ಇಂದ್ರಾಣಿ ರೂಪಿಣಿ ಪೂಜಾ ಪಾರಾಯಣ ನಡೆಸಲಾಯಿತು.

ಸಮಿತಿ ಕಾರ್ಯಾಧ್ಯಕ್ಷ ಬಿ.ಚನ್ನಕೇಶವ, ಅಧ್ಯಕ್ಷ ಎಚ್.ಡಿ.ನಾಗೇಶ್ ಹೆಗ್ಡೆ, ಖಜಾಂಚಿ ಭಾಸ್ಕರ್ ವೆನಿಲ್ಲಾ, ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಜಂಟಿ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಎಚ್.ಡಿ.ಸತೀಶ್, ಚೈತನ್ಯ ವೆಂಕಿ, ಶಿವರಾಮ್ ಶೆಟ್ಟಿ, ಡಿ.ಎನ್.ಸುಧಾಕರ್, ನಾರಾಯಣ ಶೆಟ್ಟಿ, ಎಚ್.ಎಚ್.ಕೃಷ್ಣಮೂರ್ತಿ, ಉಪೇಂದ್ರ, ಸುಂದರ್ ಇಟ್ಟಿಗೆ, ಶ್ರೀಕಾಂತ್, ಮಂಜು ಹೊಳೆಬಾಗಿಲು ಇತರರಿದ್ದರು.