ಕೊಪ್ಪ: ಟಿಎಪಿಸಿಎಂಎಸ್ ಆಡಳಿತ ಮಂಡಳಿಯ ಚುನಾವಣೆಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ 15 ಅಭ್ಯರ್ಥಿಗಳು ಏಕಕಾಲದಲ್ಲಿ ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.
ಒಟ್ಟು 15 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ನ. 29ರಂದು ಮತದಾನ ನಡೆಯಲಿದೆ. 15 ವರ್ಷಗಳಿಂದ ಟಿಎಪಿಸಿಎಂಎಸ್ ಅಧಿಕಾರ ಹಿಡಿದಿದ್ದ ಸಹಕಾರ ಭಾರತಿ ತಂಡ ಮತ್ತೊಮ್ಮೆ ಅಧಿಕಾರ ಪಡೆಯಲು ಬಿಜೆಪಿ ನಾಯಕರ ಒಗ್ಗಟ್ಟಿನ ಪ್ರದರ್ಶನದೊಂದಿಗೆ ಎಲ್ಲ 15 ಸ್ಥಾನಗಳಿಗೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು: ರಾಮಸ್ವಾಮಿ ಶೆಟ್ಟಿಗದ್ದೆ, ದಿನೇಶ್ ಹೊಸೂರು, ಎಚ್.ಎಂ ರವಿಕಾಂತ್, ಕಿರಣ್ ಮಡಬಳ್ಳಿ, ಅನೂಪ್ ನಾರ್ವೆ, ನಟರಾಜ್ ಹುತ್ತಿನಗದ್ದೆ, ಅಶೋಕ್ ಬಾಸ್ರಿ, ನವೀನ್ ಕುಮಾರ್, ಸುರೇಶ್ ಕಣಗಲ್, ಸುರೇಶ್, ಪಲ್ಲವಿ ದೀಪಕ್, ಮಮತಾ, ಕವಿರಾಜ್, ಮಣಿಕಂಠನ್ ಕಂದಸ್ವಾಮಿ, ಪ್ರದೀಪ್ ಕೆಸವೆ.