ಕಳಸ ಶ್ರೀ ಕಲಶೇಶ್ವರಸ್ವಾಮಿ ದೇವರ ಗಿರಿಜಾಕಲ್ಯಾಣೋತ್ಸವಕ್ಕೆ ಧ್ವಜಾರೋಹಣ ನೆರವೇರಿಸಲಾಯಿತು.  
ಚಿಕ್ಕಮಗಳೂರು

ಗಿರಿಜಾ ಕಲ್ಯಾಣೋತ್ಸವಕ್ಕೆ ಧ್ವಜಾರೋಹಣ

Flag Hoisting for the Girija Kalyana Utsava

ಕಳಸ: ಶ್ರೀ ಕಲಶೇಶ್ವರಸ್ವಾಮಿ ದೇವರ ಗಿರಿಜಾಕಲ್ಯಾಣ ಮಹೋತ್ಸವಕ್ಕೆ ಗುರುವಾರ ಧ್ವಜಾರೋಹಣ ನೆರವೇರಿಸಲಾಯಿತು. ಎಂಟು ದಿನಗಳ ಕಾಲದ ಮಹೋತ್ಸವ ನ.24ರ ವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ. ಮಹೋತ್ಸವದ ಪ್ರಥಮ ದಿನ ಮಂಗಳವಾರ ಗಣಪತಿ ಪೂಜೆಯೊಂದಿಗೆ ಆರಂಭಗೊಂಡು ಬುಧವಾರ ಅಂಕುರಾರ್ಪಣೆ, ಕೌತುಕೋತ್ಸವ ನಡೆಯಿತು. ಗುರುವಾರ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಂಗಳಕರ ಮುಹೂರ್ತದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ರಾತ್ರಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಮತ್ತು ಸುಪ್ರದಕ್ಷಿಣೆ ಸೇವೆಗಳು ಜರುಗಿದವು. ಗ್ರಾಮಸ್ಥರೆಲ್ಲರೂ ಒಗ್ಗೂಡಿ ಹಸಿರುವಾಣಿ ಸಮರ್ಪಣೆ ಮಾಡುವ ಮೂಲಕ ಉತ್ಸವದ ಸಂಭ್ರಮ ಇಮ್ಮಡಿಗೊಳಿಸಿದರು. 20ರ ಬೆಳಗಿನಜಾವ 3 ಗಂಟೆಗೆ ಶ್ರೀ ಗಿರಿಜಾ ಕಲ್ಯಾಣೋತ್ಸವ ವೈಭವದಿಂದ ನಡೆಯಲಿದೆ.