ಎನ್.ಆರ್.ಪುರ ತಾಲೂಕು ಕಡಹಿನಬೈಲು ಗ್ರಾಪಂಯಲ್ಲಿ ಏರ್ಪಡಿಸಿದ್ದ ಮಂಗನ ಕಾಯಿಲೆ ನಿಯಂತ್ರಣ ಕುರಿತು ಟಾಸ್ಕ್ ೆರ್ಸ್ ಸಮಿತಿ ಸಭೆಯಲ್ಲಿ ಗ್ರಾಪಂ ಆಡಳಿತಾಧಿಕಾರಿ ಧರ್ಮರಾಜ್ ಗ್ರಾಮಸ್ಥರಿಗೆ ಡೆಾ ಆಯಿಲ್ ವಿತರಿಸಿದರು. ಡಾ. ಭರತ್, ಡಾ.ವಿನಯ್, ಶೇಷಾಚಲ, ರಾಜು, ದರ್ಶನ್, ನಯನದರ್ಶನ್, ಸಭೀಹ, ಜಯಣ್ಣ ಇದ್ದರು. 
ಚಿಕ್ಕಮಗಳೂರು

ಕೆಎಫ್‌ಡಿ ನಿಯಂತ್ರಣಕ್ಕೆ ಎಲ್ಲರ ಸಹಕಾರ ಅಗತ್ಯ KFD Committee Meeting

N.R. Pura: Dharmaraj, the Administrator of the Kadahinabailu Grama Panchayat, stated that the collaboration of all departments is essential for controlling 'monkey disease' (Kyasanur Forest Disease).

ಎನ್.ಆರ್.ಪುರ: ಮಂಗನಕಾಯಿಲೆ ನಿಯಂತ್ರಣಕ್ಕೆ ಸರ್ವ ಇಲಾಖೆಗಳ ಸಹಭಾಗಿತ್ವ ಅತ್ಯಗತ್ಯ ಎಂದು ಕಡಹಿನಬೈಲು ಗ್ರಾಪಂ ಆಡಳಿತಾಧಿಕಾರಿ ಧರ್ಮರಾಜ್ ಹೇಳಿದರು.

ತಾಲೂಕಿನ ಕಡಹಿನಬೈಲು ಗ್ರಾಪಂಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಮುತ್ತಿನಕೊಪ್ಪ ಪಶು ಇಲಾಖೆ, ಅರಣ್ಯ ಇಲಾಖೆ ಆಶ್ರಯದಲ್ಲಿ ಆಯೋಜಿದ್ದ ಮಂಗನ ಕಾಯಿಲೆ ನಿಯಂತ್ರಣ ಕುರಿತು ಟಾಸ್‌‌ಕೆೆರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿ, ಪಂಚಾಯಿತಿ ಮಟ್ಟದಲ್ಲಿ ಕಾಯಿಲೆ ನಿಯಂತ್ರಣ ಸರ್ವ ಇಲಾಖೆಗಳ ಸಮನ್ವಯತೆಯಿಂದ ಮಾತ್ರ ಸಾಧ್ಯ. ಸಾರ್ವಜನಿಕರಿಗೆ ಕಾಯಿಲೆಯ ಕುರಿತು ಅರಿವು ಮೂಡಿಸಬೇಕು ಎಂದರು.

ವೈದ್ಯಾಧಿಕಾರಿ ಡಾ.ಭರತ್ ಮಾತನಾಡಿ, ಜ್ವರ, ಮೈ ಕೈ ನೋವು, ವಸಡಿನಲ್ಲಿ ರಕ್ತಸ್ರಾವ ಮಂಗನಕಾಯಿಲೆ ಲಕ್ಷಣವಾಗಿದೆ. ಈ ಲಕ್ಷಣ ಕಂಡುಬಂದ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರಕ್ತ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.

ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿ ಡಾ.ವಿನಯ್ ಮಾತನಾಡಿ, ಕಾಡಿಗೆ ಅಥವಾ ತೋಟಗಳಲ್ಲಿ ತಿರುಗಾಡುವ ಸಂದರ್ಭದಲ್ಲಿ ಡೆಾ ಆಯಿಲ್‌ನ್ನು ಕೈ ಕಾಲುಗಳಿಗೆ ಹಚ್ಚಿಕೊಂಡು ಹೋಗುವುದರಿಂದ ಉಣುಗು ಕಚ್ಚುವಿಕೆಯಿಂದ ದೂರವಿರಬಹುದು. ಮಂಗಗಳು ಸತ್ತಾಗ ಸಾರ್ವಜನಿಕರು ಅದನ್ನು ಸ್ಪರ್ಶಿಸದೆ, ಅರಣ್ಯ ಇಲಾಖೆ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ಸಹಕರಿಸಿ ಎಂದರು.

ನಯನ ದರ್ಶನ್ ಒನ್ ಹೆಲ್ತ್ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಪಶು ಪರಿವೀಕ್ಷಕ ಶೇಷಾಚಲ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ರಾಜು, ದರ್ಶನ್, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಸಭೀಹ, ಅರಣ್ಯ ಇಲಾಖೆಯ ಜಯಣ್ಣ ಮತ್ತಿತರರಿದ್ದರು.