ಮೂಡಿಗೆರೆ ತಾಲೂಕು ಜಿ.ಹೊಸಳ್ಳಿ ಗ್ರಾಮದ ಗಿರೀಶ್ ಮತ್ತು ಸುನಿಲ್ಕುಮಾರ್ ಎಂಬುವವರ ಭತ್ತದ ಗದ್ದೆಯನ್ನು ಕಾಡಾನೆ ತುಳಿದು ಹಾನಿ ಮಾಡಿರುವುದು. 
ಚಿಕ್ಕಮಗಳೂರು

ಕಾಡಾನೆಗಳಿರುವ ಪ್ರದೇಶದಲ್ಲಿ ನಿಷೇಧಾಜ್ಞೆ

Mudigere: A herd of 35 wild elephants entered the taluk on Sunday night and has taken shelter in the coffee plantations of Makonahalli and Baradahalli villages. The elephants, which were initially in three separate groups, were consolidated into two groups by Forest Department personnel on Sunday night and directed to remain in the two villages.

ಮೂಡಿಗೆರೆ: ತಾಲೂಕಿಗೆ ಭಾನುವಾರ ರಾತ್ರಿ ಪ್ರವೇಶಿಸಿರುವ 35 ಕಾಡಾನೆಗಳು ಮಾಕೋನಹಳ್ಳಿ ಮತ್ತು ಬಾರದಹಳ್ಳಿ ಗ್ರಾಮದ ಕಾಫಿ ತೋಟದಲ್ಲಿ ಬೀಡುಬಿಟ್ಟಿವೆ. ಮೂರು ಗುಂಪುಗಳಾಗಿದ್ದ ಗಜಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಭಾನುವಾರ ರಾತ್ರಿ ಎರಡು ಗುಂಪುಗಳನ್ನಾಗಿ ಮಾಡಿ 2 ಗ್ರಾಮದಲ್ಲಿ ನಿಲ್ಲುವಂತೆ ಮಾಡಿದ್ದಾರೆ.

ಹಗಲು ಹೊತ್ತಿನಲ್ಲಿ ಕಾಡಾನೆಗಳು ಬೇರೆ ಕಡೆ ಪ್ರವೇಶಿಸದಂತೆ ಇಲಾಖೆಯ 80 ಸಿಬ್ಬಂದಿ ತಡೆಗಟ್ಟುತ್ತಿದ್ದಾರೆ. ರಾತ್ರಿ ವೇಳೆ ನಾಲ್ಕು ಡ್ರೋನ್‌ಗಳ ಮೂಲಕ ಸದ್ದು ಮಾಡಿ ಗಜಗಳನ್ನು ತತ್ಕೊಳ ಗ್ರಾಮದ ಮೀಸಲು ಅರಣ್ಯದ ದಾರಿಯಲ್ಲಿ ಸಾಗುವಂತೆ ಮಾಡಲಾಗುತ್ತದೆ. ಇನ್ನೆರಡು ಡ್ರೋನ್‌ಗಳಿಂದ ಕಾಡಾನೆಗಳ ಚಲನವಲನ ಹಾಗೂ ಎಷ್ಟು ಸಂಖ್ಯೆಯಲ್ಲಿ ಕಾಡಾನೆಗಳಿವೆ ಎಂಬುದರ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆಯುತ್ತಾರೆ ಎಂದರು.

ಕಾಡಾನೆಗಳು ಸಾಗಬೇಕಾದ ದಾರಿಯನ್ನು ಡ್ರೋನ್ ಸೂಚಿಸುತ್ತದೆ. 6 ಡ್ರೋನ್‌ಗಳನ್ನು ಹಾಸನ ಜಿಲ್ಲೆಯ ಅರಣ್ಯ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ. ಹಾಸನ ಜಿಲ್ಲೆಯ ಅರಣ್ಯ ಇಲಾಖೆಯ 250 ಸಿಬ್ಬಂದಿ ಗಡಿಯವರೆಗೂ ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಮೂಡಿಗೆರೆ ತಾಲೂಕಿಗೆ ಅಟ್ಟಿದ ಬಳಿಕ ಹಾಸನಕ್ಕೆ ವಾಪಸಾಗಿದ್ದಾರೆ. ಈಗ ಚಿಕ್ಕಮಗಳೂರು ಜಿಲ್ಲೆಯ ಎಲಿಫೆಂಟ್ ಟಾಸ್ಕ್‌ಫೋರ್ಸ್, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯ 80 ಜನರ ತಂಡ ನಿರಂತರವಾಗಿ ಕಾರ್ಯಾಚರಣೆಗಿಳಿದಿದೆ.

ತತ್ಕೊಳ ಮೀಸಲು ಅರಣ್ಯಕ್ಕೆ ಕಾಡಾನೆಗಳನ್ನು ಅಟ್ಟುವ ಕಾರ್ಯಾಚರಣೆ ಸ್ಥಗಿತಗೊಳಿಸಿ ಮರಳಿ ಹಾಸನ ಜಿಲ್ಲೆಯ ಮೂಲಕ ಬೇರೆ ರಾಜ್ಯದ ಅರಣ್ಯಕ್ಕೆ ಅಟ್ಟುವಂತೆ ಒತ್ತಾಯಿಸಿ ಬೇಲೂರು ಮತ್ತು ಮೂಡಿಗೆರೆ ತಾಲೂಕಿನ ಗಡಿ ಭಾಗದ ಗ್ರಾಮಗಳ ಜನರು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ನಿರಂತರವಾಗಿ ವಾಗ್ವಾದಕ್ಕಿಳಿದಿದ್ದಾರೆ. ಗಡಿಯಲ್ಲಿ ಭಾನುವಾರ 2 ತಾಲೂಕಿನ ಜನ ಗುಂಪು ಸೇರಿ ಪರಸ್ಪರ ವಾಗ್ವಾದ ನಡೆಸಿದ್ದಾರೆ.

ಸ್ಥಳಕ್ಕೆ ಪೊಲೀಸರು ಮತ್ತು ಹಿರಿಯ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಮಾಜಿ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರು ಗಡಿ ಪ್ರದೇಶಕ್ಕೆ ಭೇಟಿ ನೀಡಿ ಸಾರ್ವಜನಿಕರನ್ನು ಸಮಾಧಾನಪಡಿಸಿದ್ದಾರೆ.