ಎನ್.ಆರ್.ಪುರ: ಕಸ್ತೂರಿ ರಂಗನ್ ವರದಿ ವಿರೋಧಿಸಿ ಕಾನೂರು ವಿವಿಧೋದ್ದೇಶ ಸಹಕಾರ ಸಂಘದಿಂದ ತಹಸೀಲ್ದಾರ್ ಡಾ. ನೂರಲ್ ಹುದಾ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕಾನೂರು ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ ನಡೆದ ಸದಸ್ಯರ ಸಭೆಯಲ್ಲಿ ಕಸ್ತೂರಿ ರಂಗನ್ ವರದಿ ತಿರಸ್ಕರಿಸಿ ಸರ್ವಾನುಮತದಿಂದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕಸ್ತೂರಿ ರಂಗನ್ ವರದಿ ಜಾರಿಗೆ ಬಂದರೆ ರೈತರ ಬದಕು ದುಸ್ತರವಾಗಲಿದೆ. ಈಗಿರುವ ವರದಿ ಪ್ರಕಾರ ಜನವಸತಿ ಪ್ರದೇಶ ಸಹ ಕಸ್ತೂರಿ ರಂಗನ್ ವರದಿಯಲ್ಲಿ ಸೇರಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಕಸ್ತೂರಿ ರಂಗನ್ ವರದಿ ಜಾರಿಗೆ ಮಾಡಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಕಾನೂರು ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ವಿ.ಕೆ.ಸುಧಾಕರ್, ಉಪಾಧ್ಯಕ್ಷ ಟಿ.ಹಿರಿಯಣ್ಣ, ನಿರ್ದೇಶಕರಾದ ಎಚ್.ಕೆ.ಬಾಲಚಂದ್ರ, ಎಚ್.ಎನ್.ಅಶೋಕ್, ಎಂ.ಡಿ.ಇಂಪಾ, ಸಂಘದ ಸಿಇಒ ಎಚ್.ಎಸ್.ಸುಫೀಲ್ ಇದ್ದರು.