ಬಡಗಬೈಲು ಗ್ರಾಮದಲ್ಲಿ ಆನೆಗಳು ಭತ್ತದ ಪೈರು ತುಳಿದು ನಾಶಪಡಿಸಿರುವುದು. 
ಚಿಕ್ಕಮಗಳೂರು

ಆನೆಗಳ ದಾಳಿಗೆ ಭತ್ತದ ಪೈರು ನಾಶ

ಎನ್.ಆರ್.ಪುರ: ಮೆಣಸೂರು ಗ್ರಾಮ ಪಂಚಾಯಿತಿಯ ಬಡಗಬೈಲು ಗ್ರಾಮದ ಕನಗೇರಿ, ಗುಡ್ಡದಮನೆ, ಶೆಟ್ಟಿಕೊಪ್ಪ ಸಮೀಪದ ಮಳಲಿ ಭಾಗದಲ್ಲಿ ಬುಧವಾರ ರಾತ್ರಿ ಕಾಡಾನೆಗಳು ಭತ್ತದ ಗದ್ದೆಗೆ ನುಗ್ಗಿ ಪೈರು ನಾಶ ಮಾಡಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಎನ್.ಆರ್.ಪುರ: ಮೆಣಸೂರು ಗ್ರಾಮ ಪಂಚಾಯಿತಿಯ ಬಡಗಬೈಲು ಗ್ರಾಮದ ಕನಗೇರಿ, ಗುಡ್ಡದಮನೆ, ಶೆಟ್ಟಿಕೊಪ್ಪ ಸಮೀಪದ ಮಳಲಿ ಭಾಗದಲ್ಲಿ ಬುಧವಾರ ರಾತ್ರಿ ಕಾಡಾನೆಗಳು ಭತ್ತದ ಗದ್ದೆಗೆ ನುಗ್ಗಿ ಪೈರು ನಾಶ ಮಾಡಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕನಗೇರಿ ಕೆ.ಕೆ.ಜಾರ್ಜ್, ಗುಡ್ಡದಮನೆ ಅಣ್ಣಯ್ಯನಾಯ್ಕ, ಮಳಲಿ ಉಮೇಶ, ಸಂದೇಶ ಅವರ ಭತ್ತದ ಗದ್ದೆಗಳಿಗೆ ನುಗ್ಗಿದ ಆನೆಗಳು ಭತ್ತದ ಪೈರನ್ನು ತುಳಿದು, ತಿಂದು ಹಾಳು ಮಾಡಿವೆ. ಎರಡು ಕಾಡಾನೆಗಳು ಬಂದಿರಬಹುದು ಎಂದು ಗ್ರಾಮಸ್ಥರು ಅಂದಾಜು ಮಾಡಿದ್ದಾರೆ.