ತರೀಕೆರೆ ತಹಸೀಲ್ದಾರ್ ಎಚ್.ಜೆ.ರಶ್ಮಿಗೆ ಅಕ್ಷರ ದಾಸೋಹ ಬಿಸಿಯೂಟ ಕಾರ್ಯಕರ್ತೆಯರ ೆಡರೇಷನ್ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಟಿ.ಜಿ.ಶಿವಕುಮಾರ್, ಚಂದ್ರಮ್ಮ, ಶೋಭಾ, ವನಜಾಕ್ಷಮ್ಮ ಇತರರಿದ್ದರು. 
ಚಿಕ್ಕಮಗಳೂರು

ಅಡುಗೆ ತಯಾರಕರನ್ನು ಕೆಲಸದಿಂದ ಕೈಬಿಡುವ ಹುನ್ನಾರ

ತರೀಕೆರೆ: ಬಿಸಿಯೂಟ ಕಾರ್ಯಕ್ರಮ ಖಾಸಗೀಕರಣಗೊಳಿಸಬಾರದು ಎಂದು ಎಐಟಿಯುಸಿ ತಾಲೂಕು ಸಂಘಟನಾ ಕಾರ್ಯದರ್ಶಿ ಟಿ.ಜಿ.ಶಿವಕುಮಾರ್ ಸರ್ಕಾರವನ್ನು ಆಗ್ರಹಿಸಿದರು.

ಅಕ್ಷರ ದಾಸೋಹ ಬಿಸಿಯೂಟ ಕಾರ್ಯಕರ್ತೆಯರ ೆಡರೇಷನ್ ಪದಾಧಿಕಾರಿಗಳ ಜತೆ ತಹಸೀಲ್ದಾರ್ ಎಚ್.ಜೆ.ರಶ್ಮಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿ, ರಾಜ್ಯ ಶಿಕ್ಷಕರ ಸಂಘವೊಂದು ಮಧ್ಯಾಹ್ನದ ಬಿಸಿಯೂಟ ಯೋಜನೆ ರಾಜ್ಯ ನಿರ್ದೇಶಕರಿಗೆ ಮನವಿ ಸಲ್ಲಿಸಿ ಬಿಸಿಯೂಟ ತಯಾರಿಕೆ ಜವಾಬ್ದಾರಿಯಿಂದ ಶಿಕ್ಷಕರನ್ನು ವಿಮುಖಗೊಳಿಸಿ ಕ್ಲಸ್ಟರ್ ಕಿಚನ್ ಸೆಂಟರ್ ಮೂಲಕ ಖಾಸಗಿ ಸಂಘ, ಸಂಸ್ಥೆಗಳಿಗೆ ವಹಿಸಬೇಕೆಂದು ಕೋರಿದೆ. ಇದನ್ನೇ ನೆಪವಾಗಿಸಿಕೊಂಡಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆ ಉಪ ನಿರ್ದೇಶಕರು 25 ವರ್ಷಗಳಿಂದ ಕಡಿಮೆ ವೇತನಕ್ಕೆ ದುಡಿಯುತ್ತಿರುವ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆದುಹಾಕುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಬಿಸಿಯೂಟ ಕಾರ್ಯಕರ್ತೆಯರ ಪರಿಸ್ಥಿತಿ ಅರಿಯದೆ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿರುವ ಅಧಿಕಾರಿಗಳ ನಡೆ ಆಕ್ಷೇಪಾರ್ಹ. ಅದರಲ್ಲೂ ಜಿಲ್ಲಾ ಶಿಕ್ಷಣಾಧಿಕಾರಿ ಹಾಗೂ ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕರಿಂದ ಅಭಿಪ್ರಾಯ ಕೇಳಿರುವುದು ಖಂಡನೀಯ. ತಕ್ಷಣವೇ ಈ ನಿರ್ಧಾರ ಕೈಬಿಟ್ಟು ಬಿಸಿಯೂಟ ಕಾರ್ಯಕರ್ತೆಯರ ಹಿತ ಬಯಸದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅಕ್ಷರ ದಾಸೋಹ ಬಿಸಿಯೂಟ ಕಾರ್ಯಕರ್ತೆಯರ ೆಡರೇಷನ್ ತಾಲೂಕು ಅಧ್ಯಕ್ಷೆ ಚಂದ್ರಮ್ಮ, ಕಾರ್ಯದರ್ಶಿ ಶೋಭಾ, ವನಜಾಕ್ಷಮ್ಮ, ತಾಸೀನಾ, ಹಸೀನಾ ಬಾನು, ಕಲಾವತಿ, ಪುಷ್ಪಾ ಮತ್ತಿತರರಿದ್ದರು.