ದೀಪಾವಳಿ ಪ್ರಯುಕ್ತ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಶ್ರೀಮಠದ ಗೋ ಶಾಲೆಯಲ್ಲಿ ಪೂಜೆ ಸಲ್ಲಿಸಿದರು. 
ಚಿಕ್ಕಮಗಳೂರು

ಅಂಟಿಕೆ-ಪಿಂಟಿಕೆ ತಂಡ ಮನೆಗಳಿಗೆ ಭೇಟಿ Diwali

Balipadyami

ಶೃಂಗೇರಿ: ತಾಲೂಕಿನಾದ್ಯಂತ ಬೆಳಕಿನ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ರಂಗೋಲಿ ಬಿಡಿಸಿ, ತಳಿರುತೋರಣ ಕಟ್ಟಿದ ಬಳಿಕ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಜಾನುವಾರುಗಳಿಗೆ ಅಡಿಕೆ ಹಿಂಗಾರ ಹೂವು, ಹಣ್ಣಡಿಕೆ, ಪಚ್ಚೆತೆನೆ, ಬಾಳೆಹಣ್ಣು, ವೀಳ್ಯದೆಲೆ, ಕಾಡುಕಿತ್ತಳೆ ಹಾರವನ್ನು ಹಾಕಿ ಶೃಂಗರಿಸಲಾಯಿತು. ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಸಿಹಿ ತಿನಿಸು, ಸಪ್ಪೆ ರೊಟ್ಟಿ ನೀಡಿ ಗೋವುಗಳನ್ನು ಹೊರಗಡೆ ಬಿಡಲಾಯಿತು. ಸಂಜೆ ಗೋವುಗಳು ಮನೆಗೆ ಮರಳಿದ ನಂತರ ಮಹಿಳೆಯರು ಆರತಿ ಮಾಡಿ ಸ್ವಾಗತಿಸಿದರು. ಜಮೀನಿನ ಸಲಕರಣೆಗಳಿಗೆ ಪೂಜೆ ಸಲ್ಲಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಅಂಟಿಕೆ-ಪಿಂಟಿಕೆ ತಂಡ ಮನೆಗಳಿಗೆ ಭೇಟಿ ನೀಡಿ ಜ್ಯೋತಿ ಬೆಳಗಿಸಿದರು. ರಾತ್ರಿ ತುಳಸಿಕಟ್ಟೆಯಲ್ಲಿ ದೀಪ ಹಚ್ಚಿ ಮಕ್ಕಳೊಂದಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಶ್ರೀಮಠದಲ್ಲಿ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಗೋಶಾಲೆಯಲ್ಲಿ ಗೋಪೂಜೆ ನೆರವೇರಿಸಿದರು. ಯತಿವರ್ಯರು ಶ್ರೀಮಠದ ಎಲ್ಲ ದೇವಾಲಯಗಳನ್ನು ದರ್ಶಿಸಿ ವಿಶೇಷ ಪೂಜೆಯಲ್ಲಿ ಭಾಗಿಯಾದರು. ಸಂಜೆ ಜಗನ್ಮಾತೆ ಸನ್ನಿಧಿಯಲ್ಲಿ ಬಲೀಂದ್ರ ಪೂಜೆ, ಮಹಾಜನರ ಹಾಗೂ ಮಹಾರಾಜರ ಕಾಣಿಕೆ ಸಮರ್ಪಿಸಲಾಯಿತು.