ತರೀಕೆರೆಯಲ್ಲಿ ನವೀಕೃತ ಮ್ಯಾಮ್ಕೋಸ್ ಕಚೇರಿಯನ್ನು ಮಾಜಿ ಶಾಸಕ ಡಿ.ಎಸ್.ಸುರೇಶ್ ಉದ್ಘಾಟಿಸಿದರು. ಎಚ್.ಎಸ್.ಮಹೇಶ್ ಹುಲ್ಕುಳಿ, ವಸಂತ್‌ಕುಮಾರ್, ಶ್ರೀಕಾಂತ್ ಬರುವೆ, ಟಿ.ಎಲ್.ರಮೇಶ್, ಟಿ.ವಿ.ಶಿವಶಂಕರಪ್ಪ, ಟಿ.ಎಂ.ವೆಂಕಟೇಶ್ ಇತರರಿದ್ದರು.
ತರೀಕೆರೆ: ಮೂರು ಜಿಲ್ಲೆಯಲ್ಲಿ ಕಾರ್ಯವ್ಯಾಪ್ತಿ ವಿಸ್ತರಿಸಿರುವ ಮ್ಯಾಮ್ಕೋಸ್ ಅಡಿಕೆ ಬೆಳೆಗಾರರ ಶ್ರೇಯೋಭಿವೃದ್ಧಿ ಜತೆ ಸಮಸ್ಯೆಗೆ ಪೂರಕವಾಗಿ ಸ್ಪಂದಿಸಿ ಕೆಲಸ ಮಾಡುತ್ತಿದೆ ಎಂದು ಮಾಜಿ ಶಾಸಕ ಡಿ.ಎಸ್.ಸುರೇಶ್ ಹೇಳಿದರು.
ಪಟ್ಟಣದ ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘ ಆವರಣದಲ್ಲಿ ನವೀಕೃತಗೊಳಿಸಿರುವ ಮ್ಯಾಮ್ಕೋಸ್ ಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿ, ಬೆಳೆಗಾರರು ಸಂಸ್ಥೆಯಿಂದ ಸಿಗುವ ಸೌಲಭ್ಯ ಬಳಸಿಕೊಳ್ಳಬೇಕು ಎಂದರು.
ಪುರಸಭೆ ಸದಸ್ಯ ವಸಂತ್‌ಕುಮಾರ್, ಮ್ಯಾಮ್ಕೋಸ್ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬರುವೆ, ನಿರ್ದೇಶಕರಾದ ಟಿ.ಎಲ್.ರಮೇಶ್, ಯಡಗೆರೆ ಸುಬ್ರಹ್ಮಣ್ಯ, ಬಿ.ಸಿ.ನರೇಂದ್ರ, ಪ್ರಮುಖರಾದ ಟಿ.ವಿ.ಶಿವಶಂಕರಪ್ಪ, ಟಿ.ಎಂ.ವೆಂಕಟೇಶ್, ರೂಪ್ಲಾನಾಯ್ಕ, ಶಾಖಾ ವ್ಯವಸ್ಥಾಪಕ ಎಲ್.ಎಸ್.ಪ್ರದೀಪ್‌ಕುಮಾರ್ ಮತ್ತಿತರರಿದ್ದರು,