ಶೃಂಗೇರಿ ತಾಲೂಕಿನ ನೆರಳಕೊಡಿಗೆ ಮೆಟ್ರಿಕ್ ನಂತರದ ಬಾಲಿಕಾ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಸಿ.ಆರ್.ಮೋಹನ್ ಕುಮಾರ್, ಬಿ.ಆರ್.ನಾಗರಾಜ್, ನಿಹಾರಿಕಾ, ಅಕ್ಷತಾ, ನಮಿತಾ, ದೀಪಿಕಾ, ಸಾನಿಕಾ ಇದ್ದರು.  
ಚಿಕ್ಕಮಗಳೂರು

ಮಹಿಳೆಯರು ಸುರಕ್ಷತೆಗೆ ಜಾಗೃತಿ ವಹಿಸಿ

ಶೃಂಗೇರಿ: ಅಪರಾಧಗಳು ನಡೆಯದಂತೆ ತಡೆಗಟ್ಟಲು ವೈಯಕ್ತಿಕ ಸುರಕ್ಷತೆ ಹಾಗೂ 
ಅಪರಿಚಿತ ವ್ಯಕ್ತಿಗಳ ಜತೆ ಮಾತುಕತೆ ನಡೆಸುವಾಗ ಎಚ್ಚರಿಕೆ ವಹಿಸಬೇಕು ಎಂದು  ಪಿಎಸ್‌ಐ ಬಿ.ಆರ್.ನಾಗರಾಜ್ ತಿಳಿಸಿದರು.
ತಾಲೂಕಿನ ನೆರಳಕೊಡಿಗೆ ಮೆಟ್ರಿಕ್ ನಂತರದ ಬಾಲಿಕಾ ವಿದ್ಯಾರ್ಥಿನಿಲಯದಲ್ಲಿ ಶುಕ್ರವಾರ ಪೊಲೀಸ್ ಇಲಾಖೆ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ-25 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭದ್ರತೆಗಾಗಿ ಪರಿಸರದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. 
ಕತ್ತಲಾದ ಮೇಲೆ ಒಂಟಿಯಾಗಿ ಹೆಣ್ಣು ಮಕ್ಕಳು ಹೊರಗಡೆ ತೆರಳುವುದನ್ನು ಆದಷ್ಟು ಕಡಿಮೆ ಮಾಡಬೇಕು. ಬದುಕಿನ ಭದ್ರತೆಗೆ ಹೆಣ್ಣು ಮಕ್ಕಳು ಸದಾ ಎಚ್ಚರಿಕೆ ವಹಿಸಬೇಕು ಎಂದರು.
ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಸಿ.ಆರ್.ಮೋಹನ್ ಕುಮಾರ್ ಮಾತನಾಡಿ,   ಸಕಾರಾತ್ಮಕ ಯೋಚನೆಗಳಿಂದ ಸಮಾಜದಲ್ಲಿ ಉನ್ನತ ಕೆಲಸ ಮಾಡುವತ್ತ ಸದಾ ಚಿಂತನೆ ಮಾಡಬೇಕು. ಮಹಿಳೆಯರ ಹಾಗೂ ಮಕ್ಕಳ ರಕ್ಷಣೆ ಕುರಿತು ಪೊಲೀಸ್ ಇಲಾಖೆ  ಸಹಕಾರ ನೀಡುತ್ತಿದ್ದು ತುರ್ತು ಸಂದರ್ಭದಲ್ಲಿ ಸಹಾಯವಾಣಿ 112ಗೆೆ ಕರೆ ಮಾಡಬೇಕು. ನಮ್ಮ ಸಂರಕ್ಷಣೆ ಮಾಡಿಕೊಳ್ಳುವ ಆತ್ಮವಿಶ್ವಾಸ ಇರಬೇಕು. ಅನ್ಯಾಯ ನಡೆದಾಗ ಅದನ್ನು ಖಂಡಿಸುವ ಮನೋಪ್ರವೃತ್ತಿ ಯುವಪೀಳಿಗೆ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಪೂಜಾ, ಕಾವ್ಯಾ, ವಿದ್ಯಾ, ನಿಶ್ಚಿತಾ ಇದ್ದರು.