ಶೃಂಗೇರಿ ತಾಲೂಕಿನ ಬೆಳಂದೂರಿನಲ್ಲಿ ಏರ್ಪಡಿಸಿದ್ದ ಸಂಜೀವಿನಿ ಒಕ್ಕೂಟದ ಸಭೆಯಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸುಮಾ, ಜೈನಾಬಿ, ಆಫೀಯಾ, ತಸ್ವಿನ್ ಇತರರಿದ್ದರು. 
ಚಿಕ್ಕಮಗಳೂರು

ಸಂಜೀವಿನಿ ಒಕ್ಕೂಟದಿಂದ ಮಹಿಳೆಯರು ಸಬಲ

ಶೃಂಗೇರಿ: ಗ್ರಾಮದಲ್ಲಿ ಸ್ಥಾಪಿಸಲಾದ ಸಂಜೀವಿನಿ ಸ್ವಸಹಾಯ ಸಂಘ ಒಕ್ಕೂಟದಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗಿದ್ದು ಅನೇಕ ಉದ್ಯೋಗ ಸೃಷ್ಟಿಯಾಗಿದೆ ಎಂದು ತಾಪಂ ಎನ್‌ಆರ್‌ಎಲ್‌ಎಂ ವ್ಯವಸ್ಥಾಪಕ ಆದರ್ಶ ಹೇಳಿದರು.
ಅಡ್ಡಗದ್ದೆ ಗ್ರಾಪಂ ಬೆಳಂದೂರು ಗ್ರಾಮದ ಆಜ್ಮತ್ ಬಾನು ಅವರ ಮನೆಯಂಗಳದಲ್ಲಿ ಬುಧವಾರ ಏರ್ಪಡಿಸಿದ್ದ ಸಂಜೀವಿನಿ ಒಕ್ಕೂಟದ 100ನೇ ಸಭೆಯಲ್ಲಿ ಮಾತನಾಡಿದರು. ಸಂಜೀವಿನಿ ಒಕ್ಕೂಟದಿಂದ ಮಾಸಿಕ ಸಂತೆ ಏರ್ಪಡಿಸುತ್ತಿದ್ದು, ಒಕ್ಕೂಟದ ಮಹಿಳೆಯರು ಸಿದ್ಧಪಡಿಸಿದ ವಸ್ತುವನ್ನು ಮಾರಾಟ ಮಾಡಲು ವೇದಿಕೆ ಕಲ್ಪಿಸಲಾಗಿದೆ. ಸ್ವಉದ್ಯೋಗಕ್ಕೆ ಇದು ಉತ್ತಮ ಅವಕಾಶವಾಗಿದ್ದು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸ್ವಸಹಾಯ ಸಂಘದ ಅಜ್ಮತ್‌ಬಾನು ಮಾತನಾಡಿ, ಒಕ್ಕೂಟ ರಚನೆಯಾದ ನಂತರ ಮಹಿಳೆಯರು ಒಟ್ಟಾಗಿ ಸೇರಿ ವಿವಿಧ ವಿಷಯ ಚರ್ಚಿಸಲು ಸಾಧ್ಯವಾಗಿದೆ. ನಾವು ಮನೆಯಲ್ಲಿ ಮಾಡುವ ಉತ್ಪನ್ನವನ್ನು ಮೌಲ್ಯವರ್ಧನೆ ಮಾಡಲು ಉತ್ತಮ ಅವಕಾಶವೂ ಲಭ್ಯವಾಗಿದೆ ಎಂದರು.
ಸಂಘದ ಸದಸ್ಯರಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಜುಬೇದಾಬಾನು, ಅಂಗನವಾಡಿ ಕಾರ್ಯಕರ್ತೆ ಸುಮಾ, ಸಂಘದ ಮಾಜಿ ಅಧ್ಯಕ್ಷೆ ಜೈನಾಬಿ, ಆಫೀಯಾ, ತಸ್ವಿನ್ ಇತರರಿದ್ದರು.