ಭುವನಕೋಟೆ ಗ್ರಾಪಂ ಉತ್ತಮೇಶ್ವರದಲ್ಲಿ ದುರ್ಗಾ ಸಮೇತ ಉತ್ತಮೇಶ್ವರ ಸ್ವಾಮಿ ರಥೋತ್ಸವ ನಡೆಯಿತು. 
ಚಿಕ್ಕಮಗಳೂರು

ಉತ್ತಮೇಶ್ವರ ಸ್ವಾಮಿ ರಥೋತ್ಸವ

ಪ್ರಮುಖ ಮುಖ್ಯಾಂಶಗಳು

  • ದೇವರಿಗೆ ಹೂವಿನ ಅಲಂಕಾರ
  • ದವಸ ಧಾನ್ಯಗಳನ್ನು ರಥಕ್ಕೆ ಎರಚಿ ರಥ ಎಳೆದರು

ಕೊಪ್ಪ: ಭುವನಕೋಟೆ ಗ್ರಾಮ ಪಂಚಾಯಿತಿ ಉತ್ತಮೇಶ್ವರದಲ್ಲಿರುವ ದುರ್ಗಾ ಸಮೇತ ಉತ್ತಮೇಶ್ವರ ಸ್ವಾಮಿ ರಥೋತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು.

ಬೆಳಗ್ಗೆ ವಿಶೇಷ ಪೂಜೆ ನಡೆಯಿತು. ದೇವರಿಗೆ ಹೂವಿನ ಅಲಂಕಾರ ಮಾಡಲಾಗಿತ್ತು. ಭಕ್ತರು ಹಣ್ಣು ಕಾಯಿ ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು. ಮಧ್ಯಾಹ್ನ ರಥೋತ್ಸವ ನಡೆಯಿತು. ದವಸ ಧಾನ್ಯಗಳನ್ನು ರಥಕ್ಕೆ ಎರಚಿ ಹರ್ಷೋದ್ಘಾರದೊಂದಿಗೆ ರಥವನ್ನು ಅನತಿ ದೂರದವರೆಗೆ ಎಳೆದರು.

ಸಾಂಸ್ಕೃತಿಕ ಕಾರ್ಯಕ್ರಮ ಭಾಗವಾಗಿ ಜನಾರ್ದನ ಮಂಡಗಾರು ತಂಡದಿಂದ ಸಂಜೆ  ಶಾಂಭವಿ ವಿಲಾಸ ಯಕ್ಷಗಾನ ತಾಳಮದ್ದಳೆ ಆಯೋಜಿಸಲಾಗಿತ್ತು. ಗುರುವಾರ ಅವಭ್ರತ ಸ್ನಾನ, ಪಲ್ಲಕ್ಕಿ ಉತ್ಸವ ನಡೆಯಿತು. ನೆಮ್ಮಾರು ಪಾರ್ಥಸಾರಥಿ ತಂಡದಿಂದ ನಾಮ ಸಂಕೀರ್ತನೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಜ.23ಕ್ಕೆ ಶುದ್ಧ ಸಂಪ್ರೋಕ್ಷಣೆ ನಡೆಯಲಿದೆ.