ಎನ್.ಆರ್.ಪುರದ ಪಬ್ಲಿಕ್ ಸ್ಕೂಲ್‌ನಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಣ್ ಶೆಟ್ಟಿ ಜಂತುಹುಳು ನಿವಾರಣ ಕರಪತ್ರಗಳನ್ನು ಬಿಡುಗಡೆಗೊಳಿಸಿದರು. ಡಾ. ಕ್ಷಮಾ, ಚಂದ್ರಪ್ಪ, ಪೂರ್ಣಾವತಿ, ಡಾ. ಮಹೇಂದ್ರ ಕಿರೀಟಿ ಇತರರಿದ್ದರು. 
ಚಿಕ್ಕಮಗಳೂರು

ರಕ್ತಹೀನತೆ ತಡೆಗೆ ಮಾತ್ರೆ ಬಳಸಿ

ಎಸ್.ಎನ್.ರವೀಂದ್ರ

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಣದಷ್ಟೇ ಆರೋಗ್ಯವೂ ಮುಖ್ಯ
  • ಅಲ್ಬೆಂಡಜೋಲ್
ಎನ್.ಆರ್.ಪುರ: ಮಕ್ಕಳಲ್ಲಿ ಜಂತುಹುಳುವಿನಿಂದಾಗುವ ರಕ್ತಹೀನತೆ ತಡೆಗಟ್ಟಲು ಅಲ್ಬೆಂಡಜೋಲ್ ಮಾತ್ರೆ ನೀಡುವಂತೆ ಬಿಇಒ ಶಬಾನಾ ಅಂಜುಮ್ ತಿಳಿಸಿದರು.
ಕೆಪಿಎಸ್‌ನಲ್ಲಿ ನಡೆದ ಜಂತುಹುಳು ನಿವಾರಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಶಿಕ್ಷಣದಷ್ಟೇ ಆರೋಗ್ಯವೂ ಮುಖ್ಯ.  ಮಕ್ಕಳಲ್ಲಿ ರಕ್ತಹೀನತೆ ತಡೆಗಟ್ಟಿದರೆ ಗ್ರಹಿಕೆ ಶಕ್ತಿಯೂ ಹೆಚ್ಚುತ್ತದೆ ಎಂದರು. 
ತಾಲೂಕು ಆರೋಗ್ಯ ಅಧಿಕಾರಿ ಡಾ. ಮಹೇಂದ್ರ ಕಿರೀಟಿ ಮಾತನಾಡಿ, ಪ್ರತಿ ವಷರ್ ೆ.10 ಮತ್ತು ಆ.10ರಂದು ಜಂತುಹುಳು ನಿವಾರಣಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಒಂದು ವರ್ಷದಿಂದ 19 ವರ್ಷದ ಒಳಗಿನ ಎಲ್ಲ ಮಕ್ಕಳಿಗೆ ಉಚಿತವಾಗಿ ಆರೋಗ್ಯ ಇಲಾಖೆಯಿಂದ ಅಲ್ಬೆಂಡಜೋಲ್ ಮಾತ್ರೆಗಳನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳು ಚಪ್ಪಲಿಹಾಕಿಕೊಂಡೇ ನಡೆಯಬೇಕು. ಬಯಲಲ್ಲಿ ಶೌಚ ಮಾಡದೆ ಕಡ್ಡಾಯವಾಗಿ ಶೌಚಗೃಹ ಬಳಸಬೇಕು ಎಂದು ತಿಳಿಸಿದರು.
ಎಲ್ಲ ವಿದ್ಯಾರ್ಥಿಗಳಿಗೆ ಜಂತುಹುಳು ಮಾತ್ರೆಗಳನ್ನು ವಿತರಿಸಲಾಯಿತು. ಜಂತುಹುಳು ನಿವಾರಣ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಣ್ ಶೆಟ್ಟಿ, ಉಪಾಧ್ಯಕ್ಷ ಉದಯ್, ಪಪಂ ಮಾಜಿ ಅಧ್ಯಕ್ಷೆ ಜುಬೇದಾ, ಡಾ. ಕ್ಷಮಾ, ಮುಖ್ಯಶಿಕ್ಷಕ ಚಂದ್ರಪ್ಪ,  ಪಿ.ಪಿ.ಬೇಬಿ, ಡೈಸಿ, ಪೂರ್ಣಾವತಿ, ಚೈತ್ರಾ, ಸುಹಾಸ್, ಅನಿತಾ ಇತರರಿದ್ದರು.