ಶೃಂಗೇರಿಯಲ್ಲಿ ಆಯೋಜಿಸಿದ್ದ ಉಪಾಕರ್ಮ ಆಚರಣೆಯಲ್ಲಿ ವಿಶ್ವಕರ್ಮ ಸಮಾಜ ಬಾಂಧವರು ಭಾಗವಹಿಸಿದ್ದರು. ರಾಘವೇಂದ್ರ ಆಚಾರ್ಯ, ಮಹೇಶ್, ಗಣೇಶ್ ಇತರರಿದ್ದರು. 
ಚಿಕ್ಕಮಗಳೂರು

ಉಪಾಕರ್ಮ ಶಾಸ್ತ್ರೀಯ ಕಟ್ಟುಪಾಡು

ಎಸ್.ಎನ್.ರವೀಂದ್ರ

ಪ್ರಮುಖ ಮುಖ್ಯಾಂಶಗಳು

  • ಶ್ರೀ ವಿಶ್ವಕರ್ಮ ಸಂಘ
  • ಯಜ್ಞೋಪವೀತ
ಶೃಂಗೇರಿ: ಉಪಾಕರ್ಮ ಎಂದರೆ ವೇದಾಧ್ಯಯನ ಆರಂಭ ಹಾಗೂ ಯಜ್ಞೋಪವೀತ ಬದಲಾಯಿಸುವ ಪ್ರಮುಖ ಆಚರಣೆ. ಮನುಕುಲಕ್ಕೆ ವೇದಮಂತ್ರಗಳನ್ನು ನೀಡಿದ ಋಷಿಗಳಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವಾಗಿದೆ ಎಂದು ವೇಲಾಪುರಿ ವಿಶ್ವನಾಥ್ ಶರ್ಮ ತಿಳಿಸಿದರು.
ಬುಧವಾರ ಶ್ರೀ ವಿಶ್ವಕರ್ಮ ಸಂಘದಿಂದ ಆಯೋಜಿಸಿದ್ದ ಉಪಾಕರ್ಮ ಧಾರ್ಮಿಕ ಆಚರಣೆಯಲ್ಲಿ ಮಾತನಾಡಿ, ಶ್ರಾವಣ ಮಾಸದಲ್ಲಿ ಬರುವ ಉಪಾಕರ್ಮ ಯಜ್ಞೋಪವೀತ  ಧರಿಸಿದವರಿಗೆ ಅತಿ ಮುಖ್ಯವಾಗಿದೆ. ಅದು ಶಾಸೀಯ ಕಟ್ಟುಪಾಡಿನಲ್ಲಿ ನಡೆಯುವ ವಾರ್ಷಿಕವಿಯಾಗಿದೆ. ಹಲವು ಕಡೆ ಉಪಾಕರ್ಮ ದಿನ ಪುಣ್ಯಾಹ, ನಾಂದಿ ಹೋಮ, ಗುರುಕಾಣಿಕೆ ನೀಡುವ ಪದ್ಧತಿ ಇದೆ. ಹಿಂದಿನ ಕಾಲದಲ್ಲಿ ವೇದಶಾಸ ಪಾರಂಗತರ ಮನೆಯಲ್ಲಿ ಹತ್ತಾರು ಜನ ಸೇರಿ ಸಾಮೂಹಿಕ ಯಾಗ ಕಾರ್ಯದಲ್ಲಿ ಭಾಗವಹಿಸಿ ಜನಿವಾರ ಧರಿಸುವ ಪದ್ಧತಿ ಇತ್ತು ಎಂದರು.
ಶ್ರೀ ವಿಶ್ವಕರ್ಮ ಸಂಘದ ಅಧ್ಯಕ್ಷ ಅಶೋಕ್ ಆಚಾರ್ಯ, ಕಾರ್ಯದರ್ಶಿ ಸುರೇಂದ್ರ ಆಚಾರ್ಯ, ಕೋಶಾಧ್ಯಕ್ಷ ಸಂತೋಷ್, ಪದಾಕಾರಿ ರಾಘವೇಂದ್ರ ಆಚಾರ್ಯ ಇದ್ದರು.