ತರೀಕೆರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು. ಟಿ.ಎನ್.ಜಗದೀಶ್, ಹೇಮಲತಾ, ಆರ್.ಕುಮಾರಪ್ಪ, ಪರಮೇಶ್, ಅಂಜನ್ ಅನಿಲ್‌ಕುಮಾರ್ ಇತರರಿದ್ದರು. 
ಚಿಕ್ಕಮಗಳೂರು

ಸಚಿವ ಸ್ಥಾನಕ್ಕೆ ಆಗ್ರಹಿಸಿ ಪಂಜಿನ ಮೆರವಣಿಗೆ

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್ ಸೇವಾದಳ
  • ಬೇಸರ ವ್ಯಕ್ತಪಡಿಸಿದರು.
ತರೀಕೆರೆ: ಚಿಕ್ಕಮಗಳೂರು ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು.
ಜಿಲ್ಲೆಗೆ ಅನ್ಯಾಯ ಮಾಡಬಾರದು. ಇಂದಿರಾ ಗಾಂಧಿಗೆ ರಾಜಕೀಯ ಮರುಜನ್ಮ ನೀಡಿದ ಪುಣ್ಯಭೂಮಿಗೆ ಸಚಿವ ಸ್ಥಾನ ಕೊಡಲೇಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.
ಕಾಂಗ್ರೆಸ್ ಸೇವಾದಳದ ತಾಲೂಕು ಅಧ್ಯಕ್ಷ ಟಿ.ಎನ್.ಜಗದೀಶ್ ಮಾತನಾಡಿ, ಜಿಲ್ಲೆ ಕೆಲವು ವರ್ಷಗಳಿಂದ ಸಚಿವ ಸ್ಥಾನದಿಂದ ವಂಚಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾರುಪತ್ಯ ಸಾಧಿಸಿದ್ದು, ಈ ದಿಸೆಯಲ್ಲಿ ಹೈಕಮಾಂಡ್ ಸ್ಪಂದಿಸಿ ಹಿರಿಮೆ ಹೊಂದಿರುವ ಕಾಫಿ ನಾಡಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು. ಎರಡು ಬಾರಿ ಗೆಲುವು ಸಾಧಿಸಿರುವ ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಹೇಮಲತಾ, ಪುರಸಭೆ ಸದಸ್ಯರಾದ ಆರ್.ಕುಮಾರಪ್ಪ, ಪರಮೇಶ್, ಅಂಜನ್ ಅನಿಲ್‌ಕುಮಾರ್, ಪ್ರಮುಖರಾದ ಕೆ.ವಿ.ದರ್ಶನ್, ಟಿ.ಎಸ್.ದೇವರಾಜ್, ರವಿ, ಸಲ್ಮಾನ್, ಆಂಟೋನಿ, ಸೈಮನ್, ವೇದಮೂರ್ತಿ ಮತ್ತಿತರರಿದ್ದರು.