ಚಿಕ್ಕಮಗಳೂರು ಬಸವನಹಳ್ಳಿಯಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಜ್ಞಾನಪ್ರಕಾಶ ಭವನದಲ್ಲಿ ಜ್ಞಾನ ಜ್ಯೋತಿ ಹಾಗೂ ಜ್ಞಾನ ರತ್ನ ಹಾಗೂ ಜ್ಞಾನ ದೀಪ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಎಚ್.ಡಿ.ತಮ್ಮಯ್ಯ, ಡಾ.ಗೀತಾ, ಭಾಗ್ಯಕ್ಕ, ವಿಫುಲ್ ಕುಮಾರ್ ಜೈನ್ ಮತ್ತಿತರರಿದ್ದರು.
- ಯಾವುದೇ ಜಾತಿ ಭೇದವಿಲ್ಲದೆ ವಿದ್ಯಾರ್ಥಿಗಳನ್ನು ಗೌರವಿಸುತ್ತಿರುವ ಸಂಸ್ಥೆ
- ಶಾಸಕ ಎಚ್.ಡಿ.ತಮ್ಮಯ್ಯ ಅಭಿಮತ
ಚಿಕ್ಕಮಗಳೂರು: ಬ್ರಹ್ಮಾಕುಮಾರೀಸ್ ಸಂಸ್ಥೆಯು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನು ಮಾಡುತಿರುವುದು ಖುಷಿಯ ವಿಚಾರ. ಯಾವುದೇ ಜಾತಿ ಭೇದವಿಲ್ಲದೆ ವಿದ್ಯಾರ್ಥಿಗಳನ್ನು ಗೌರವಿಸುತ್ತಿರುವ ಸಂಸ್ಥೆ ಇದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ನಗರದ ಬಸವನಹಳ್ಳಿಯಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಜ್ಞಾನಪ್ರಕಾಶ ಭವನದಲ್ಲಿ ಜ್ಞಾನ ಜ್ಯೋತಿ ಹಾಗೂ ಜ್ಞಾನ ರತ್ನ ಹಾಗೂ ಜ್ಞಾನ ದೀಪ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ಶಾಂತಿ, ನೆಮ್ಮದಿ ಬೇಕೆಂದರೆ ಬ್ರಹ್ಮಾಕುಮಾರೀಸ್ ಸಂಸ್ಥೆಗೆ ಬರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಯುಷ್ಯ ಅಧಿಕಾರಿ ಡಾ. ಗೀತ, ಕಾಫಿ ಬೆಳೆಗಾರರಾದ ಊ.ಅ.ಸುರೇಂದ್ರ, ಡಾ. ಅನಿತ್ ಕುಮಾರ್, ನಗರಸಭೆ ಸದಸ್ಯ ವಿಪುಲ್ ಕುಮಾರ್ ಜೈನ್ , ರಾಜಯೋಗಿನಿ ಬ್ರಹ್ಮಾಕುಮಾರಿ ಭಾಗ್ಯಕ್ಕ ಮತ್ತಿತರರಿದ್ದರು. ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ, ಈಶ್ವರೀಯ ಕಾಣಿಕೆ ನೀಡಿ ಗೌರವಿಸಲಾಯಿತು. ಜಯಶಂಕರ್ ಸ್ವಾಗತಿಸಿ, ನಂದಕುಮಾರ್ ನಿರೂಪಣೆ ಮಾಡಿ, ಗಂಗಾಧರ ವಂದಿಸಿದರು.