ಶೃಂಗೇರಿಯಲ್ಲಿ ಬಿರುಸಿನ ಮಳೆಯಿಂದ ತುಂಗಾ ನದಿ ತುಂಬಿ ಹರಿಯಿತು.
- ಸಾಮಾನ್ಯ ಜನಜೀವನಕ್ಕೆ ತೊಂದರೆ
- ವಿದ್ಯಾರಣ್ಯಪುರ 52.5,
ಶೃಂಗೇರಿ: ತಾಲೂಕಿನಾದ್ಯಂತ ಮಳೆ ಚುರುಕುಗೊಂಡಿದ್ದು, ಶುಕ್ರವಾರ ದಿನವಿಡೀ ಮಳೆಯಾಗಿದೆ. ಆಗಾಗ ಬಿರುಸಿನ ಮಳೆಯಾಗುತ್ತಿದ್ದು, ಸಾಮಾನ್ಯ ಜನಜೀವನಕ್ಕೆ ತೊಂದರೆಯಾಗಿತ್ತು. ಮುಂಗಾರು ಮಳೆ ವಿಲ ಎಂಬ ಹವಾಮಾನ ಇಲಾಖೆ ಮನ್ಸೂಚನೆಗೆ ವಿರುದ್ಧವಾಗಿ ಭರ್ಜರಿ ಮಳೆಯಾಗುತ್ತಿದೆ. 24 ಗಂಟೆಯಲ್ಲಿ ಕಿಗ್ಗಾ 74.5 ಮಿ.ಮೀ, ಶೃಂಗೇರಿ 63.4, ಬೇಗಾರ್ 62, ವಿದ್ಯಾರಣ್ಯಪುರ 52.5, ನೆಮ್ಮಾರ್ 45 ಮಿ.ಮೀ ಮಳೆ ದಾಖಲಾಗಿದೆ.
ಒಂದೇಸಮನೆ ಸುರಿದ ಮಳೆಯಿಂದ ತುಂಗಾ ನದಿ ನೀರಿನ ಮಟ್ಟ ಏರಿಕೆಯಾಗಿ, ತಗ್ಗು ಪ್ರದೇಶಗಳಿಗೆ ನೀರು ಆವರಿಸುತ್ತಿತ್ತು. ನಂದಿನಿ, ನಳಿನಿ ಮತ್ತು ಮಾಲತಿ ನದಿಗಳ ನೀರಿನ ಮಟ್ಟವೂ ಏರಿಕೆಯಾಗಿತ್ತು. ಕೆರೆಕಟ್ಟೆ, ನೆಮ್ಮಾರ್, ವಳಲೆ ಮಾವಿನಕಾಡು, ಮಾತೊಳ್ಳಿ ಮುಂತಾದೆಡೆ ಸುರಿಯುತ್ತಿರುವ ಮಳೆಯಿಂದ ಗ್ರಾಮೀಣ ಪ್ರದೇಶದ ಹಳ್ಳದಿಂದ ತುಂಗಾ ನದಿಗೆ ಹೆಚ್ಚಿನ ನೀರು ಹರಿದುಬಂದಿತು. ಮಳೆ ಹೆಚ್ಚಿದ್ದರೂ ಗಾಳಿ ಅರ್ಭಟ ಕಡಿಮೆ ಇತ್ತು.