ಎನ್.ಆರ್.ಪುರ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ನಡೆದ ತಿರಂಗ ಯಾತ್ರೆ ಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿದರು.  
ಚಿಕ್ಕಮಗಳೂರು

ತ್ರಿವರ್ಣ ದ್ಜಜ ಭಾರತೀಯರ ಸ್ವಾಭಿಮಾನದ ಸಂಕೇತ

ಎನ್.ಆರ್.ಪುರ: ತ್ರಿವರ್ಣ ಧ್ವಜ ಪ್ರತಿ ಭಾರತೀಯರ ಸ್ವಾಭಿಮಾನದ ಸಂಕೇತ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ನಡೆದ ತಿರಂಗ ಯಾತ್ರೆ ಸಭೆಯಲ್ಲಿ ಮಾತನಾಡಿ, ಕೆಲವು ವರ್ಷಗಳ ಹಿಂದೆ ಕಾಶ್ಮೀರದ ಭಯೋತ್ಪಾದಕರು ಕಾಶ್ಮೀರದ ಲಾಲ್ಚೌಕದಲ್ಲಿ ಭಾರತೀಯ ರಾಷ್ಟ ಧ್ವಜ ಹಾರಿಸುವಂತೆ ಸವಾಲು ಹಾಕಿದ್ದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸವಾಲು ಸ್ವೀಕಾರ ಮಾಡಿ ಕಾಶ್ಮೀರದಲ್ಲಿ 370ನೇ ವಿಧಿ ಜಾರಿಗೆ ತಂದು ಕಾಶ್ಮೀರದ ಲಾಲ್ ಚಾಕದಲ್ಲಿ ರಾಷ್ಟ ಧ್ವಜ ಹಾರಿಸಿದರು. ಈ ಹಿಂದೆ ವಿಶ್ವದಲ್ಲಿ ಅಮರಿಕ ದೇಶದ ಪ್ರಧಾನಿ ಏನು ಹೇಳುತ್ತಾರೆ ಎಂದು ವಿಶ್ವದ ಹಲವಾರು ರಾಷ್ಟ್ರಗಳು ಕಾಯುತ್ತಿತ್ತು. ಈಗ ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿ ಏನು ಹೇಳುತ್ತಾರೆ ಎಂದು ವಿಶ್ವದ ಎಲ್ಲಾ ರಾಷ್ಟ್ರಗಳು ಕಾಯುತ್ತಿದೆ ಎಂದರು.
ಕಸ್ತೂರಿ ರಂಗನ್ ವರದಿ, ಪರಿಸರ ಸೂಕ್ಷ್ಮ ವಲಯ ಮುಂತಾದ ಯೋಜನೆಗಳು ಕೇಂದ್ರ ಸರ್ಕಾರದ ಯೋಜನೆಗಳಲ್ಲ. ಸುಪ್ರೀಂ ಕೋರ್ಟ್‌ನ ಆದೇಶದ ಪ್ರಕಾರ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುತ್ತಿದೆ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು. ಬಿ.ಎಚ್.ಕೈಮರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 2017ರಲ್ಲಿ ಕೇರಳಂ ರಾಜ್ಯದ ಪ್ರಕರಣವೊಂದರಲ್ಲಿ ಪರಿಸರವಾದಿಗಳು ಸುಪ್ರೀಂ ಕೋರ್ಟ್‌ಗೆ ಹೋಗಿದ್ದರು. ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಹಲವಾರು ಜಿಲ್ಲೆಗಳು ಸೇರಿ 20,665 ಕಿ.ಮೀ. ವ್ಯಾಪ್ತಿಯ ಪರಿಸರ ಉಳಿಸಬೇಕು ಎಂದು ಪರಿಸರವಾದಿಗಳವಾದದಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡುತ್ತಿದೆ. ಇದರಲ್ಲಿ ಕಾಂಗ್ರೆಸ್ ರಾಜಕೀಯ ಮಾಡಬಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಒಟ್ಟಾಗಿ ಹೋರಾಟ ಮಾಡಬೇಕಿದೆ. ಕಸ್ತೂರಿ ರಂಗನ್ ವರದಿ ಬಗ್ಗೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬೊಮ್ಮಾಯಿ, ಸಿದ್ದರಾಮಯ್ಯ ಸರ್ಕಾರ ತಿರಸ್ಕಾರ ಮಾಡಿ ಕೇಂದ್ರಕ್ಕೆ ಕಳಿಸಿದೆ. ಕೇರಳಂ ಸರ್ಕಾರ ಸಮಿತಿ ರಚನೆ ಮಾಡಿ ಹೋರಾಟ ಮಾಡಿದೆ. ಅದೇ ರೀತಿ ಕರ್ನಾಟಕವೂ ಸಂಬಂಧಪಟ್ಟ ಕ್ಷೇತ್ರಗಳ ಶಾಸಕರು, ಸಂಸದರ ಸಮಿತಿ ರಚಿಸಿ ಹೋರಾಟ ಮಾಡಬೇಕಾಗಿದೆ. ನಾನು, ಮೈಸೂರು ಸಂಸದ ಒಡೆಯರ್, ಕಾಗೇರಿ ಅವರು ಕೇಂದ್ರ ಪರಿಸರ ಸಚಿವರ ಹತ್ತಿರ ಚರ್ಚೆ ನಡೆಸಲು ಸಮಯ ಕೇಳಲಾಗದೆ ಎಂದರು.
ಬಿ.ಎಚ್.ಕೈಮರದಲ್ಲಿ ಬೈಕ್ ಹಾಗೂ ಕಾರು ಮೆರವಣಿಗೆ ನಡೆಯಿತು. ಮಾಜಿ ಸಚಿವ ಡಿ.ಎನ್.ಜೀವರಾಜ್, ತಾಲೂಕು ಬಿಜೆಪಿ ಅಧ್ಯಕ್ಷ ನೀಲೇಶ್, ಯುವ ಮೋರ್ಚಾ ಅಧ್ಯಕ್ಷ ಪ್ರೀತಮ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ದಯಾನಂದ್,ನಗರ ಘಟಕದ ಅಧ್ಯಕ್ಷ ಸುರಭಿ ರಾಜೇಂದ್ರ ಇದ್ದರು.