ಎನ್.ಆರ್.ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ ಚಿಗರು ಬಿಡುಗಡೆ ಮಾಡಲಾಯಿತು 
ಚಿಕ್ಕಮಗಳೂರು

ಉತ್ತಮ ಸಮಾಜ ನಿರ್ಮಾಣದಲ್ಲಿ ಯುವಜನರ ಪಾತ್ರ ದೊಡ್ಡದು

ಎನ್.ಆರ್.ಪುರ: ಉತ್ತಮ ಸಮಾಜ ನಿರ್ಮಾಣದಲ್ಲಿ ಯುವಜನರ ಪಾತ್ರ ದೊಡ್ಡದು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ ಶೆಟ್ಟಿ ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ಯುವ ರೆಡ್ ಕ್ರಾಸ್ ವೇದಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಳೆದ 3 ವರ್ಷದಲ್ಲಿ ಕಲಿತ ಶಿಕ್ಷಣ, ಪಠ್ಯೇತರ ಚಟುವಟಿಕೆ, ಪ್ರೀತಿ, ನಂಬಿಕೆಗಳ ಸವಿ ನೆನಪಿನ ಬುತ್ತಿಯನ್ನು ಮುಂದಿನ ನಿಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಿ ಎಂದು ಕರೆ ನೀಡಿದರು.
ಹೊಳೆಹೊನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಎಚ್.ರುದ್ರಮುನಿ ವಿಶೇಷ ಉಪನ್ಯಾಸ ನೀಡಿ, ಶಿಕ್ಷಣ ಎಂದರೆ ಕಲಿಕೆಯ ಅನುಭವವಾಗಿದೆ. ಅಧ್ಯಾಪಕರು ವಿದ್ಯಾರ್ಥಿಗಳಿಗೆ ಜ್ಞಾನದ ಹಣತೆ ದೀಪ ಹಚ್ಚಿದ್ದಾರೆ. ಎನ್‌ಎಸ್‌ಎಸ್ ಶಿಬಿರಗಳಲ್ಲಿ ಭಾಗವಹಿಸಿದರೆ ದೇಶದ ರಾಷ್ಟ್ರಪತಿಗಳ ಕಾರ್ಯಕ್ರಮದಲ್ಲೂ ಭಾಗವಹಿಸುವ ಅವಕಾಶ ದೊರೆಯಲಿದೆ ಎಂದರು.
ಸಿಡಿಸಿ ಸದಸ್ಯೆ ಜುಬೇದ ಮಾತನಾಡಿ, ವಿದ್ಯಾರ್ಥಿಗಳು ಹೊಗಳಿಕೆ ಹಾಗೂ ಟೀಕೆಯನ್ನು ಸಮಚಿತ್ತದಿಂದ ಎದುರಿಸುವ ಸಾಮಾರ್ಥ್ಯ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಸಾಮರಸ್ಯದಿಂದ ಬದುಕುವುದನ್ನು ಕಲಿಯಬೇಕು ಎಂದು ಕರೆ ನೀಡಿದರು.
ಸಿಡಿಸಿ ಸದಸ್ಯರಾದ ಎಂ.ಎಸ್.ಶಶಿಧರ, ಬಿನು, ಉಪನ್ಯಾಸಕರಾದ ಸಿ.ಸವಿತಾ ಮಂಜು, ಆರ್.ಕೆ.ಪ್ರಸಾದ್, ದಿನಕರ್‌ನಾಯಕ್, ಅಶೋಕ್ ಕುಮಾರ್, ಶಂಕರ ನಾಯ್ಕ, ಮಂಜುನಾಥ್ ಇದ್ದರು.