ತರೀಕೆರೆ ಪ್ರವಾಸಿ ಮಂದಿರದಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಅವರಿಗೆ ಸನ್ಮಾನಿಸಲಾಯಿತು. ಜಿ.ಜಿ.ತಿಪ್ಪೇಶ್, ಮಹೇಂದ್ರಸ್ವಾಮಿ, ಎಚ್.ಕೆ.ಶೇಖರಪ್ಪ, ಅಣ್ಣಯ್ಯ, ಪ್ರಮೋದ್ ಇತರರಿದ್ದರು.
ತರೀಕೆರೆ: ಸುಮಾರು 40 ವರ್ಷಗಳಿಂದ ಒಳ ಮೀಸಲಾತಿ ಜಾರಿಗೆ ನಡೆಸಿದ ಹೋರಾಟಕ್ಕೆ ಈಗ ಲ ದೊರೆತಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ಪ್ರವಾಸಿ ಮಂದಿರದಲ್ಲಿ ಬುಧವಾರ ಮಾದಿಗ ಸಮುದಾಯದ ಮುಖಂಡರೊಂದಿಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಮಾದಿಗ ದೊಡ್ಡ ಸಮುದಾಯವಾಗಿದ್ದರೂ ಇತರ ಜನಾಂಗದವರೊಂದಿಗೆ ಸ್ಪರ್ಧೆ ಮಾಡಲು ಸಾಧ್ಯವಾಗದೆ ಸೌಲಭ್ಯಗಳಿಂದ ವಂಚಿತವಾಗಿದೆ. ಈ ಎಲ್ಲ ದೃಷ್ಟಿಕೋನದಿಂದ ನಡೆಸಿದ ಹೋರಾಟಕ್ಕೆ ಸ್ಪಂದಿಸಿರುವ ಸಿಎಂ ಸಿದ್ದರಾಮಯ್ಯ ಒಳ ಮೀಸಲಾತಿ ಕಲ್ಪಿಸಿ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಿದೆ ಎಂದರು.
ಒಳ ಮೀಸಲಾತಿಯಲ್ಲಿ ಜನಸಂಖ್ಯೆ ಮತ್ತು ಆಯಾ ಜಾತಿಗಳ ಸ್ಥಿತಿಗತಿಗಳ ಆಧಾರಿಸಿ ಮೀಸಲಾತಿ ಕಲ್ಪಿಸಲಾಗಿದೆ. ಮೀಸಲಾತಿಗಾಗಿ ಕಾನೂನಾತ್ಮಕ ಹೋರಾಟ ನಡೆಸಿದ ಹೊರತಾಗಿಯೂ ನ್ಯಾಯಾಲಯ ರಾಜ್ಯ ಸರ್ಕಾರಗಳಿಗೆ ಒಳ ಮೀಸಲಾತಿ ಜಾರಿಗೊಳಿಸುವ ಪರಮಾಧಿಕಾರವಿದೆ ಎಂಬ ಆದೇಶದ ಹಿನ್ನೆಲೆಯಲ್ಲಿ ಒಳ ಮೀಸಲಾತಿ ಜಾರಿಯಾಗಿರುವುದು ಸಂತಸ ತಂದಿದೆ. ಡಾ.ಬಿ.ಆರ್.ಅಂಬೇಡ್ಕರ್ ಆಶಯದಂತೆ ಮೀಸಲಾತಿ ದೊರಕಿದ್ದು ಮುಂದಿನ ಎಲ್ಲ ಸರ್ಕಾರಿ ಉದ್ಯೋಗಗಳು ಒಳ ಮೀಸಲಾತಿಯಡಿ ಭರ್ತಿಯಾಗಲಿವೆ ಎಂದು ತಿಳಿಸಿದರು.
ದಲಿತ ಸಮುದಾಯದ ಪ್ರಮುಖರಾದ ಜಿ.ಜಿ.ತಿಪ್ಪೇಶ್, ಮಹೇಂದ್ರ ಸ್ವಾಮಿ, ಎಚ್.ಕೆ.ಶೇಖರಪ್ಪ, ಅಣ್ಣಯ್ಯ, ಪ್ರಮೋದ್, ವೈ.ಎಸ್.ಮಂಜಪ್ಪ, ಜಿ.ಟಿ.ರಮೇಶ್, ಬಸವರಾಜು, ಮಂಜಪ್ಪ, ನಾಗೇಶ್, ರಂಗನಾಥ್, ಹರೀಶ್, ಮಂಜಪ್ಪ, ಅಶೋಕ್, ಆಂಜನೇಯ, ಎಸ್.ಕೆ.ರಂಗಪ್ಪ, ಕುಮಾರಪ್ಪ, ರಘು, ಶಿವರಾಜ್, ಗುರುಮೂರ್ತಿ ಮತ್ತಿತರರಿದ್ದರು.