ಕಳಸ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘದಿಂದ ಆಟಿಡೊಂಜಿ ಕೂಟ ಕಾರ್ಯಕ್ರಮ ನಡೆಯಿತು. ಶ್ರೀನಿವಾಸ್, ರಾಮಚಂದ್ರ, ಚಂದ್ರಶೇಖರ, ಪೂರ್ಣಿಮಾ ಕಿಶೋರ್, ಹೇಮಾ ರವಿ ಸುವರ್ಣ ಇತರರಿದ್ದರು. 
ಚಿಕ್ಕಮಗಳೂರು

ತುಳುನಾಡಿನ ಮೂಲ ಆಚರಣೆಗಳು ಮರೆ (tulunadu)

ಕಳಸ: ಪ್ರಕೃತಿಯೊಂದಿಗೆ ಆರೋಗ್ಯಕ್ಕೆ ಸಹಕಾರಿಯಾದ ಆಹಾರ ಪದ್ಧತಿ, ಜೀವನ ಶೈಲಿಯನ್ನು ಆಟಿ ತಿಂಗಳು ಕಲಿಸಿಕೊಡುತ್ತದೆ. ಬದಲಾದ ಕಾಲ ಘಟ್ಟದಲ್ಲಿ ತುಳುನಾಡಿನ ಮೂಲ ಆಚರಣೆಗಳು ಮರೆಯಾಗುತ್ತಿವೆ ಎಂದು ಸಂಘದ ಗೌರವಾಧ್ಯಕ್ಷ ಎಂ.ಎ.ಶೇಷಗಿರಿ ಹೇಳಿದರು.
ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘದಿಂದ ಭಾನುವಾರ ಏರ್ಪಡಿಸಿದ್ದ ಆಟಿಡೊಂಜಿ ಕೂಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂಥ ಕಾರ್ಯಕ್ರಮಗಳನ್ನು ಮಾಡುವ ಮುಖಾಂತರ ವರ್ಷಕ್ಕೆ ಒಂದು ಬಾರಿಯಾದರೂ ಸಮುದಾಯ ಒಟ್ಟಾಗಲು ಸಹಕಾರಿಯಾಗುತ್ತದೆ. ಮಕ್ಕಳ ಪ್ರತಿಭೆಗೆ  ವೇದಿಕೆ ನೀಡಿದಂತಾಗುತ್ತದೆ ಎಂದರು. 
ಹಿರಿಯರು ಅನುಸರಿಸಿದ ಶ್ರೇಷ್ಠ ಪರಂಪರೆಯ ತಿರುಳನ್ನು ಅರಿತು ಆಚರಣೆ, ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸಲು ಇಂತಹ ಕೂಟಗಳು ಪೂರಕ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ರವಿ ಸುವರ್ಣ ಮಾತನಾಡಿ, ತಾಲೂಕಿನಲ್ಲಿ ಇರುವ ಕೆಲವೇ ಬಿಲ್ಲವ ಕುಟುಂಬಗಳು ಒಗ್ಗಟ್ಟನ್ನು ಸಮಾಜಕ್ಕೆ ತೋರಿಸಬೇಕಾಗಿದೆ. ನಮ್ಮ ಸಂಘಟನೆಗಳಿಗೆ ಬಲ ತುಂಬಲು ಇಂತಹ ಕಾರ್ಯಕ್ರಮಗಳು ಅವಶ್ಯಕ. ಸಮುದಾಯದ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡಿ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸಿ ಸಮಾಜದಲ್ಲಿ ಗಟ್ಟಿಯಾಗಿ ನಿಲ್ಲುವಂತೆ ಮಾಡಬೇಕು ಎಂದು ಹೇಳಿದರು.
ಸಮುದಾಯದ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. 21 ವರ್ಷಗಳಿಂದ ಕಳಸ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಮುಕುಂದ ಕಿಶೋರ್ ಅವರನ್ನು ಗೌರವಿಸಲಾಯಿತು.
ಸಮುದಾಯದ ಮುಖಂಡರಾದ ಶ್ರೀನಿವಾಸ್, ರಾಮಚಂದ್ರ, ಚಂದ್ರಶೇಖರ, ಪೂರ್ಣಿಮಾ ಕಿಶೋರ್, ಹೇಮಾ ರವಿ ಸುವರ್ಣ ಇತರರಿದ್ದರು.