ಜಯಪುರದಲ್ಲಿ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಜನಜಾಗೃತಿ ಯಾತ್ರೆ ನಡೆಯಿತು. ಪ್ರಮುಖರಾದ ರಂಜಿತ್ ಶೃಂಗೇರಿ, ಕಿಬ್ಳಿ ಪ್ರಸನ್ನಕುಮಾರ್, ಅಭಿಷೇಕ್ ಹೊಸಳ್ಳಿ, ಸಂತೋಷ್ ಮೇಗೂರು ಇತರರಿದ್ದರು. 
ಚಿಕ್ಕಮಗಳೂರು

ಮಲೆನಾಡಿನ ರೈತರ ಬದುಕು ಅತಂತ್ರ

ಜಯಪುರ: ಜನವಿರೋಧಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅರಣ್ಯ ನೀತಿಯಿಂದಾಗಿ ಮಲೆನಾಡಿನ ರೈತರ ಬದುಕು ಬೀದಿಗೆ ಬೀಳುವ ಆತಂಕ ಎದುರಾಗಿದೆ ಎಂದು ಮಲೆನಾಡು ರೈತ ಮತ್ತು ಕಾರ್ಮಿಕ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕಿಬ್ಳಿ ಪ್ರಸನ್ನಕುಮಾರ್ ಹೇಳಿದರು.
ಜಯಪುರದಲ್ಲಿ ಮಂಗಳವಾರ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಆಯೋಜಿಸಿದ್ದ ಜನಜಾಗೃತಿ ಯಾತ್ರೆಯಲ್ಲಿ ಮಾತನಾಡಿದ ಅವರು, ಕಾಡುಪ್ರಾಣಿಗಳ ಸಂಖ್ಯೆ ಮಿತಿಮೀರಿದ್ದು ಆನೆಗಳು, ಕಾಡುಕೋಣಗಳು, ಚಿರತೆಗಳು ನಾಡಿಗೆ ಬಂದು ರೈತರು, ಕಾರ್ಮಿಕರನ್ನು ಬಲಿ ಪಡೆಯುತ್ತಿವೆ. ಮಂಗ, ನವಿಲು, ಕಾಡು ಹಂದಿಗಳು ಸೇರಿದಂತೆ ಇತರ ಪ್ರಾಣಿಗಳು ರೈತರ ಬೆಳೆಗಳನ್ನು ಹಾಳುಮಾಡುತ್ತಿವೆ. ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ಇರುವಾಗ ಇನ್ನೊಂದೆಡೆ ಅರಣ್ಯ ಹಾಗೂ ಕಂದಾಯ ಭೂಮಿಯಲ್ಲಿ ಸಾಗುವಳಿ ಮಾಡಿರುವ ಹಾಗೂ ಮನೆಗಳನ್ನು ನಿರ್ಮಿಸಿಕೊಂಡಿರುವ ನಾಗರಿಕರನ್ನು ಒತ್ತುವರಿದಾರರು ಎಂಬ ಹಣೆಪಟ್ಟಿ ಕಟ್ಟಿ ತೆರವಿಗೆ ಅರಣ್ಯ ಇಲಾಖೆ ದಾಖಲೆಗಳನ್ನು ಸಂಗ್ರಹಿಸಿ ಗುಪ್ತವಾಗಿ ಕಾನೂನಾತ್ಮಕವಾಗಿ ಕ್ರಮ ಜರುಗಿಸುತ್ತಿದೆ ಎಂದರು. 
ಜನಜಾಗೃತಿ ಯಾತ್ರೆ ಹೇರೂರು, ಅತ್ತಿಕುಡಿಗೆ, ಹೆಗ್ಗಾರುಕುಡಿಗೆ, ಅಗಳಗಂಡಿ, ಗುಡ್ಡೇತೋಟ ಗ್ರಾಪಂ ವ್ಯಾಪ್ತಿಯಲ್ಲಿ ಸಂಚರಿಸಿತು. ಹೆಗ್ಗಾರುಕುಡಿಗೆಯಲ್ಲಿ ಮುಖಂಡರಾದ ಅತ್ತಿಕುಳಿ ಸುಂದರೇಶ್, ಹಾಗಲಗಂಚಿ ವೆಂಕಟೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಂಜಿತ್ ಶೃಂಗೇರಿ, ಪ್ರಮುಖರಾದ ಸಂತೋಷ್ ಮೇಗೂರು, ಚೇತನ್ ಮೆಣಸಿನಹಾಡ್ಯ, ಶುಭಶ್ಚಂದ್ರ ಕೊಳೆಗೋಡು, ಗುರುಪ್ರಸಾದ್ ಮೆಣಸಿನಹಾಡ್ಯ, ಗ್ರಾಪಂ ಅಧ್ಯಕ್ಷ ಕರುಣಾಕರ, ಸದಸ್ಯ ಪ್ರವೀಣ್, ಮುಖಂಡರಾದ ಸುಧಾಕರ ಇತರರಿದ್ದರು.