ಕಡೂರು ತಾಲೂಕು ವೈ.ಮಲ್ಲಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಆಷಾಢ-ಶ್ರಾವಣ ಮಾಸದ ಪ್ರವಚನ ಮಾಲಿಕೆಯ ಕಾರ್ಯಕ್ರಮವನ್ನು ಚಿಂತಕ ಚಟ್ನಳ್ಳಿ ಮಹೇಶ್ ಉದ್ಘಾಟಿಸಿದರು. ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಕೆ.ವಿರೂಪಾಕ್ಷಪ್ಪ, ಎಂ.ರಂಗಪ್ಪ, ಪುಟ್ಟರಾಜು ಮತ್ತಿತರರಿದ್ದರು.
ಕಡೂರು: ಎಐ ಆಧುನಿಕ ತಂತ್ರಜ್ಞಾನ ಅತಿ ಬಳಕೆಯಿಂದ ಗುರುವಿನ ಮಹತ್ವ ಮರೆಯಾಗುತ್ತಿರುವುದು ಬೇಸರದ ಸಂಗತಿ ಎಂದು ಚಿಂತಕ ಚಟ್ನಳ್ಳಿ ಮಹೇಶ್ ಹೇಳಿದರು.
ವೈ.ಮಲ್ಲಾಪುರ ಗ್ರಾಮದಲ್ಲಿ ಶನಿವಾರ ಎಂ.ಆರ್.ಪ್ರಕಾಶ್ ಅವರ ಮನೆ ಅಂಗಳದಲ್ಲಿ ಐಸಿರಿ ೌಂಡೇಶನ್, ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ, ಲಯನ್ಸ್ ಕ್ಲಬ್ ಚಿಕ್ಕಮಗಳೂರು ಹಾಗೂ ಶರಣ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ಬೆಳದಿಂಗಳ ಕಾರ್ಯಕ್ರಮದಲ್ಲಿ ಆಷಾಢ-ಶ್ರಾವಣ ಮಾಸದ ಪ್ರವಚನ ಮಾಲಿಕೆಯ ಆರನೇ ದಿನದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಅರಿವು ಮೂಡಿಸುವ ಪ್ರತಿ ಕ್ಷಣವೂ ಗುರುವಿಗೆ ಸಮಾನ. ಪ್ರಕೃತಿಯೂ ಪ್ರತಿಯೊಬ್ಬ ಮನುಷ್ಯನಿಗೆ ಗುರುವಾಗುತ್ತದೆ. ವಿದ್ಯೆಗೆ ವಿನಯವೇ ಭೂಷಣವಾಗಬೇಕಾದ ಕಾಲದಲ್ಲಿ ಅಲ್ಪವಿದ್ಯೆಯೇ ಅಹಂಕಾರಕ್ಕೆ ಕಾರಣವಾಗುತ್ತಿದೆ. ಪ್ರತಿಯೊಬ್ಬರಲ್ಲೂ ಸೌಜನ್ಯ, ಸರಳ ಮತ್ತು ವಿನಯವಂತಿಕೆ ಬೆಳೆಯಬೇಕಾಗಿದೆ ಎಂದರು.
ಯಳನಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ದುರಾಸೆಗಳನ್ನು ತ್ಯಜಿಸಿದರೆ ಸಂತೋಷವಾಗಿ ಜೀವನ ನಡೆಸಬಹುದು. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.
ಜಿಲ್ಲಾ ಸರಿಗನ್ನಡ ವೇದಿಕೆ ಅಧ್ಯಕ್ಷ ಎಂ.ಪ್ರಕಾಶ್ ಮಾತನಾಡಿ, ಗಿಡಮರಗಳಿರುವ ಕೃತಜ್ಞತಾ ಮನೋಭಾವ ಮನುಷ್ಯರಿಗಿಲ್ಲ ಎಂಬ ಕವಿಯ ಕವನದ ಸಾಲುಗಳನ್ನು ವಾಚಿಸಿ, ಸಮಸಮಾಜದ ನಿರ್ಮಾಣದ ಮಹತ್ವ ತಿಳಿಸಿದರು.
ಶೆಟ್ಟಿಹಳ್ಳಿ ರಾಮಜ್ಜ ಅವರು ಕಡೂರು ತಾಲೂಕು ಶರಣ ಸಾಹಿತ್ಯ ಪರಿಷತ್‌ನ ಶ್ರಾವಣ ಸಂಜೆ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿದರು. ಪ್ರಮುಖರಾದ ಹೊಸೂರು ಪುಟ್ಟರಾಜು, ಎಂ.ರಂಗಪ್ಪ, ಕುರುಬರಹಳ್ಳಿ ಮಠದ ರಾಮ ಗುರೂಜಿ, ಕದಳಿ ವೇದಿಕೆ ಅಧ್ಯಕ್ಷೆ ಸುಜಾತಾ, ಬಿ.ಕೆ.ನಾಗರಾಜಪ್ಪ, ಕೆ.ವಿರೂಪಾಕ್ಷಪ್ಪ, ಗಂಗಾಧರ ಶಿವಪುರ, ಉಮಾ ಮಹೇಶ್ವರಪ್ಪ, ನಾಗರಾಜು, ರವಿಪ್ರಕಾಶ್, ಶೀಲಾ ಇತರರಿದ್ದರು.