ಶೃಂಗೇರಿಯಲ್ಲಿ ಆಯೋಜಿಸಿದ್ದ ರಾಜರ್ಷಿ ನಾಲ್ವಡಿ ಕಷ್ಣರಾಜ ಒಡೆಯರ್ ಜನ್ಮದಿನಾಚರಣೆ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕಸಾಪ ಅಜೀವ ಸದಸ್ಯ ಕಾಳಯ್ಯ ಮತ್ತು ನಿವೃತ್ತ ಕನ್ನಡ ಶಿಕ್ಷಕ ಮಂಜುನಾಥ್ ಅವರನ್ನು ಗೌರವಿಸಲಾಯಿತು.
ಶೃಂಗೇರಿ: ಕನ್ನಡ ನಾಡು, ನುಡಿ, ನೆಲ,ಜಲ ಇತ್ಯಾದಿಗಳಿಗೆ ಕಸಾಪದಲ್ಲಿ ವಿಶೇಷ ಮನ್ನಣೆ ಸಿಗುತ್ತದೆ. ಸಾಹಿತ್ಯ, ಕಲೆ, ಸಂಗೀತ ಮನಸ್ಸುಗಳನ್ನು ಅರಳಿಸುತ್ತದೆ. ವಿಷಯಗಳನ್ನು ಗ್ರಹಿಸುತ್ತದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.
ತಾಲೂಕು ಕಸಾಪ ಪಟ್ಟಣದ ಮೆಟ್ರಿಕ್ ನಂತರದ ವಿದ್ಯಾರ್ಥಿ ವಸತಿ ನಿಲಯದಲ್ಲಿ ಆಯೋಜಿಸಿದ್ದ ರಾಜರ್ಷಿ ನಾಲ್ವಡಿ ಕಷ್ಣರಾಜ ಒಡೆಯರ್ ಜನ್ಮದಿನಾಚರಣೆ ಮತ್ತು ಶ್ರೀ ಹೂವಮ್ಮ ಹೆಗಡ್ತಿ ರಾಮಯ್ಯ ಹೆಗಡೆ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಅತ್ಯಂತ ಶ್ರೀಮಂತ ಭಾಷೆ. ಈ ಭಾಷೆ ಕೇವಲ ಸಂವಹನದ ಮಾಧ್ಯಮ ಮಾತ್ರವಲ್ಲ. ತನ್ನದೇ ಸಾಹಿತ್ಯ, ಸಂಸ್ಕೃತಿ ಮತ್ತು ಐತಿಹಾಸಿಕ ಪರಂಪರೆ ಹೊಂದಿದೆ. ಕನ್ನಡವನ್ನು ಬಳಸಿದಂತೆ ಅದರ ಮಹತ್ವ ಹೆಚ್ಚಾಗುತ್ತದೆ. ಭಾಷೆ ಎಂಬುದು ಸಂಸ್ಕೃತಿ. ಭಾಷೆ ಉಳಿದರೆ ಸಂಸ್ಕೃತಿ ಬೆಳಗುತ್ತದೆ ಎಂದರು.
ತಾಲೂಕ ಕಸಾಪ ಹಿರಿಯ ಅಜೀವ ಸದಸ್ಯಹೊಸ್ಕೆರೆ ಕಾಳಯ್ಯ ಮತ್ತು ನಿವೃತ್ತ ಕನ್ನಡ ಶಿಕ್ಷಕ ಎಚ್.ಎಂ.ಮಂಜುನಾಥ್ ಅವರನ್ನು ಗೌರವಿಸಲಾಯಿತು. ತಾಲೂಕು ಕಸಾಪ ಅಧ್ಯಕ್ಷ ಆಗುಂಬೆ ಗಣೇಶ್ ಹೆಗಡೆ, ಜಿಲ್ಲಾ ಕಸಾಪ ಸಂಚಾಲಕಿ ಪುಷ್ಪಾಲಕ್ಷ್ಮೀನಾರಾಯಣ್,ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಿ ಆನಂದ ಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಸಂಚಾಲಕ ಎ.ಕೆ.ಪಾಟೀಲ್ ಇದ್ದರು.