ಎನ್.ಆರ್.ಪುರ ಮೆಸ್ಕಾಂ ಕಚೇರಿಯಲ್ಲಿ ಜ್ವಾಲಾಮಾಲಿನಿ ಜೇಸಿ ಸಂಸ್ಥೆಯಿಂದ ಮೆಸ್ಕಾಂ ಎಇಇ ಹಾಗೂ 16 ಪವರ್‌ಮ್ಯಾನ್‌ಗಳಿಗೆ ಸೆಲ್ಯೂಟ್ ದ ಸೈಲೆಂಟ್ ಸ್ಟಾರ್ ಎಂದು ಗುರುತಿಸಿ ಸನ್ಮಾನಿಸಲಾಯಿತು. ಎಸ್.ಎಸ್.ಜಗದೀಶ್, ರಜಿತ್ ವಗಡೆ ಇದ್ದರು. 
ಚಿಕ್ಕಮಗಳೂರು

ವಿದ್ಯುತ್ ಬೆಳಕಿನ ಹಿಂದಿದೆ ಪವರ್‌ಮ್ಯಾನ್‌ಗಳ ಶ್ರಮ

ಎನ್.ಆರ್.ಪುರ: ವಿದ್ಯುತ್ ಬೆಳಕಿನ ಹಿಂದೆ ಮೆಸ್ಕಾಂ ಇಲಾಖೆಯ ಪವರ್‌ಮ್ಯಾನ್‌ಗಳ ಶ್ರಮ, ಧೈರ್ಯ ಹಾಗೂ ಅಪಾಯ ಅಡಗಿರುತ್ತದೆ ಎಂದು ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಆದರ್ಶ ಬಿ. ಗೌಡ ಹೇಳಿದರು.
ಮೆಸ್ಕಾಂ ಕಚೇರಿಯಲ್ಲಿ ಜ್ವಾಲಾಮಾಲಿನಿ ಜೇಸಿ ಸಂಸ್ಥೆಯಿಂದ ಮೆಸ್ಕಾಂ ಇಲಾಖೆ ಎಇಇ ಗೌತಮ್ ಹಾಗೂ 16 ಪವರ್‌ಮ್ಯಾನ್‌ಗಳಿಗೆ ಸೆಲ್ಯೂಟ್ ದ ಸೈಲೆಂಟ್ ಸ್ಟಾರ್ ಎಂದು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಜನರಿಗೆ ವಿದ್ಯುತ್ ಕಾಣುತ್ತದೆ.ಆದರೆ, ಅದರ ಹಿಂದೆ ಪವರ್‌ಮ್ಯಾನ್‌ಗಳ ಅಪಾರ ಶ್ರಮ ಇರುವುದು ಕೆಲವರಿಗೆ ಮಾತ್ರ ತಿಳಿಯಲಿದೆ ಎಂದರು.
ಜೇಸಿ ಸಂಸ್ಥೆಯಿಂದ ಇಂದು ಪವರ್‌ಮ್ಯಾನ್‌ಗಳನ್ನು ಸನ್ಮಾನಿಸುತ್ತಿರುವುದು ಜೇಸಿ ಸಂಸ್ಥೆಗೆ ಹೆಮ್ಮೆ ತಂದಿದೆ. ಮಳೆ, ಗಾಳಿ, ಕತ್ತಲೆಯಲ್ಲೂ ಜನರ ಮನೆಗಳಿಗೆ ಬೆಳಕು ನೀಡಬೇಕು ಎಂಬ ಉದ್ದೇಶದಿಂದ ಪವರ್‌ಮ್ಯಾನ್‌ಗಳು ವಿದ್ಯುತ್ ಕಂಬ ಏರಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಪವರ್‌ಮ್ಯಾನ್‌ಗಳು ಕೆಲಸ ಮಾಡುವಾಗ ಸಣ್ಣ ತಪ್ಪು ಮಾಡಿದರೂ ದೊಡ್ಡ ಅಪಾಯವಾಗುತ್ತದೆ ಎಂದರು.
ಜೇಸಿ ಪೂರ್ವಾಧ್ಯಕ್ಷ ಎಸ್.ಎಸ್.ಜಗದೀಶ್, ಕಾರ್ಯದರ್ಶಿ ರಜಿತ್ ವಗಡೆ, ಸದಸ್ಯರಾದ ವಿನಯ, ಜೋಯ್‌ಬ್ರೋ, ಅಪೂರ್ವ ರಾಘು, ಮಿಥುನ್, ಮೆಸ್ಕಾಂ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗೌತಮ್, ಜೂನಿಯರ್ ಇಂಜಿನಿಯರ್ ಸುರೇಶ್ ಇದ್ದರು.