ಕಡೂರು ತಾಲೂಕಿನ ಬಿ.ಎಂ.ಕೊಪ್ಪಲು ಗ್ರಾಮದಲ್ಲಿ ಶರಣಸಾಹಿತ್ಯ ಪರಿಷತ್‌ನಿಂದ ಶರಣರಬೆಳದಿಂಗಳು ಕಾರ್ಯಕ್ರಮ ನಡೆಯಿತು. ಬೆಳ್ಳಿಪ್ರಕಾಶ್, ಶ್ರೀ ಜ್ಞಾನಪ್ರಭು ಸಿದ್ದರಾಮದೇಶಿಕೇಂದ್ರ ಸ್ವಾಮೀಜಿ, ಕೆ.ವಿರೂಪಾಕ್ಷಪ್ಪ, ಡಾ. ಎಸ್.ಎನ್.ಆನಂದ್ ಮತ್ತಿತರರಿದ್ದರು.
ಕಡೂರು: ಕಾಯಕ ದಾಸೋಹ ಪ್ರಜ್ಞೆಯನ್ನು ಪ್ರಪಂಚಕ್ಕೆ ಪರಿಚಯಿಸಿದ ಕೀರ್ತಿ ಬಸವಣ್ಣ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಶಾಸಕ ಬೆಳ್ಳಿಪ್ರಕಾಶ್ ತಿಳಿಸಿದರು.
ಬಿ.ಎಂ.ಕೊಪ್ಪಲು ಗ್ರಾಮದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಹಾಗೂ ಯಳನಡು ಮಠ ಮತ್ತು ಬಿ.ಎಂ.ಕೊಪ್ಪಲು ಗ್ರಾಮಸ್ಥರ ಸಹಯೋಗದಲ್ಲಿ ಏರ್ಪಡಿಸಿದ್ದ ಶರಣರ ಬೆಳದಿಂಗಳ ಕಾರ್ಯಕ್ರಮ ಮತ್ತು ಬಸವ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಬಸವಾದಿ ಶರಣರ ಮಾರ್ಗದರ್ಶನದಲ್ಲಿ ಮಾನವ ಕಲ್ಯಾಣ ಆಶಯಕ್ಕೆ ಅನುಗುಣವಾಗಿ ನಡೆದ ಸಮಗ್ರ ಕ್ರಾಂತಿ ವಿಶ್ವದ ಯಾವುದೇ ಭಾಗದಲ್ಲಿ ಒಮ್ಮೆಲೆ ನಡೆದ ನಿದರ್ಶನಗಳೇ ಇಲ್ಲ. ವಿಶ್ವದಲ್ಲಿ ಕಾಲ ಕಾಲಕ್ಕೆ ಅನೇಕ ರೀತಿಯ ಕ್ರಾಂತಿಗಳಾಗಿವೆ. ಈ ಹಿನ್ನೆಲೆಯಲ್ಲಿ ಕಲ್ಯಾಣ ಕ್ರಾಂತಿ ಶರಣರು ಮಾಡಿದಂಥ ಸಮಗ್ರ ಕ್ರಾಂತಿಯನ್ನು ಹೋಲಲು ಸಾಧ್ಯವಿಲ್ಲ. ಇದಕ್ಕೆ ಮೂಲ ಕಾರಣ ಮಾನವ ಸಮುದಾಯದ ಎಲ್ಲ ಕ್ಷೇತ್ರಗಳ ಸದಾಶಯಗಳಿಗೆ ಸ್ಪಂದಿಸುವ ಕ್ರಾಂತಿಗೆ ನಾಂದಿ ಹಾಡಿದವರು ಬಸವಣ್ಣ ಎಂದು ಬಣ್ಣಿಸಿದರು.
ಯಳನಡು ಮಠದ ಶ್ರೀ ಜ್ಞಾನಪ್ರಭುಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿ.ಎನ್.ಮಲ್ಲಿಕಾರ್ಜುನಪ್ಪ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಕೆ.ಬಿ.ಬಸವರಾಜಪ್ಪ, ಅಧ್ಯಕ್ಷ ಕೆ.ವಿರೂಪಾಕ್ಷಪ್ಪ, ಗಂಗಾಧರ ಶಿವಪುರ, ಎಂ.ಶಾಂತಪ್ಪ, ಬಿ.ಪಿ.ದೇವಾನಂದ್, ಎಂ.ಆರ್.ಪ್ರಕಾಶ್, ಸುಜಾತಾ ಜಡೆಮಲ್ಲಪ್ಪ, ಎ.ಎಂ.ಕುಮಾರಪ್ಪ, ಬಿ.ಸಿ.ದೇವೇಂದ್ರಪ್ಪ, ಚಟ್ನಳ್ಳಿ ಕಲ್ಲೇಶಪ್ಪ, ಬಿ.ಎನ್.ಬಸವರಾಜಪ್ಪ, ರಾಜನಾಯ್ಕ, ತಮ್ಮಯ್ಯಪ್ಪ, ಚಂದ್ರಪ್ಪ ಮತ್ತಿತರರಿದ್ದರು.