ಶೃಂಗೇರಿಯಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಭೆಯನ್ನು ಶ್ರೀಮಠದ ಸತೀಶ್ ಉದ್ಘಾಟಿಸಿದರು. ಅಸಗೋಡು ಜಯಸಿಂಹ, ಬಿ.ಎಲ್.ರವಿಕುಮಾರ್, ರಾಘವೇಂದ್ರ ಭಟ್, ಮಹಾಬಲ ಭೀಡೆ, ಸುಧೀಂದ್ರ, ಶ್ರೀಧರರಾವ್, ಸುಮಂಗಲ ಆನಂದಸ್ವಾಮಿ ಇತರರಿದ್ದರು. 
ಚಿಕ್ಕಮಗಳೂರು

ದೇಶದ ಪ್ರಗತಿಗೆ ಬ್ರಾಹ್ಮಣರ ಕೊಡುಗೆ ದೊಡ್ಡದು (brahmins)

ಶೃಂಗೇರಿ: ದೇಶದ ಜನಸಂಖ್ಯೆಯಲ್ಲಿ ಶೇ.2ರಷ್ಟಿರುವ ಬ್ರಾಹ್ಮಣ ಸಮುದಾಯವು ಸಮರ್ಪಣಾ ಮನೋಭಾವ ಹಾಗೂ ದೇಶದ ಪ್ರಗತಿಗೆ ನೀಡಿದ ಕೊಡುಗೆ ಮಹತ್ವದ್ದು ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ಹೇಳಿದರು.
ರಾಜಾನಗರದ ವಿದ್ಯಾಭಾರತೀ ಭವನದಲ್ಲಿ ಶನಿವಾರ ತಾಲೂಕು ಬ್ರಾಹ್ಮಣ ಮಹಾಸಭಾ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಭೆಯಲ್ಲಿ ಮಾತನಾಡಿದರು. 
ಸರ್ಕಾರವು ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ವಿಪ್ರ ಸ್ವಉದ್ಯಮ ನೇರ ಸಾಲ ಯೋಜನೆ ಮೂಲಕ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರು ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ, ಹೋಟೆಲ್ ಉದ್ಯಮ, ಅಂಗಡಿ, ಟೈಲರಿಂಗ್, ಟ್ಯಾಕ್ಸಿ, ಹಸು ಸಾಕಣೆಯಂತಹ ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವು ನೀಡಲಾಗುತ್ತದೆ. ಕನಿಷ್ಠ 1 ಲಕ್ಷದಿಂದ 2 ಲಕ್ಷ ರೂ. ವರೆಗೆ ಆರ್ಥಿಕ ನೆರವು ನೀಡಿ ಸಹಾಯಧನ ವಿತರಿಸಲಾಗುತ್ತಿದೆ. ಕಳೆದ ಎರಡು ವರ್ಷದಲ್ಲಿ 21 ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪ್ರತಿಭಾವಂತ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು. ಲೆಕ್ಕಪರಿಶೋಧಕ ಮಧುಸೂದನ್, ಶ್ರೀಮಠದ ಕೃಷ್ಣ ಭಟ್ ಹಾಗೂ ಸತೀಶ್ ಅವರನ್ನು ಅಭಿನಂದಿಸಲಾಯಿತು.
ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಬಿ.ಎಲ್.ರವಿಕುಮಾರ್, ರಾಘವೇಂದ್ರ ಭಟ್, ಮಹಾಸಭಾದ ಮಹಾಬಲ ಭೀಡೆ, ಸುಧೀಂದ್ರ, ಜಿ.ಎಂ.ಸತೀಶ್, ಶ್ರೀಧರ ರಾವ್, ಸುಮಂಗಲ ಆನಂದಸ್ವಾಮಿ ಇತರರಿದ್ದರು.