ಕಳಸ ಕೆಪಿಎಸ್ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನ ಆಚರಿಸಲಾಯಿತು.  
ಚಿಕ್ಕಮಗಳೂರು

ಮನಸ್ಸು-ದೇಹ ಜೋಡಿಸುವ ಕಲೆ

ಕಳಸ: ಕೆಪಿಎಸ್ ಪ್ರೌಢಶಾಲಾ ವಿಭಾಗದಲ್ಲಿ ಯೋಗ ದಿನ ಆಚರಿಸಲಾಯಿತು. ಆನೇಕಲ್ ತಾಲೂಕಿನ ಜಿಗಣಿ ಎಸ್.ವ್ಯಾಸ ಸ್ಕೂಲ್ ಆ್ ಯೋಗ ಆ್ಯಂಡ್ ನ್ಯಾಚುರೋಪಥಿಕ್ ಮೆಡಿಸಿನ್ ಸಂಸ್ಥೆಯ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿನಿ, ಯೋಗ ಶಿಕ್ಷಕಿ ಅನುಷಾ ಅವರು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಯೋಗಾಭ್ಯಾಸ ನಡೆಸಿಕೊಟ್ಟರು.
ತಾಡಾಸನ, ತ್ರಿಕೋನಾಸನ, ವೃಕ್ಷಾಸನ, ವಕ್ರಾಸನ, ಭದ್ರಾಸನ, ಶಶಾಂಕಾಸನ, ಭುಜಂಗಾಸನ, ಸೇತುಬಂಧಾಸನ ಮತ್ತು ಶವಾಸನಗಳ ಅಭ್ಯಾಸ ಮಾಡಿಸಿದರು. ಪ್ರಾಣಾಯಾಮ ವಿಭಾಗದಲ್ಲಿ ಶೀತಲಿ, ಸದಂತ, ಬ್ರಾಹ್ಮರಿ ಹಾಗೂ ನಾಡಿಶುದ್ಧಿ ಪ್ರಾಣಾಯಾಮಗಳನ್ನು ಕಲಿಸಿದರು. ಜತೆಗೆ ವಿಭಾಗೀಯ ಪ್ರಾಣಾಯಾಮ ಮತ್ತು ಡೀಪ್ ರಿಲ್ಯಾಕ್ಸೇಶನ್ ಟೆಕ್ನಿಕ್ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮತೋಲನದಲ್ಲಿಟ್ಟುಕೊಳ್ಳುವ ಮಾಹಿತಿ ನೀಡಿದರು. 
ಶಾಲೆಯ ಉಪಪ್ರಾಚಾರ್ಯ ಸುರೇಶ್ ಮಾತನಾಡಿ, ಯೋಗವು ಕೇವಲ ದೈಹಿಕ ಕಸರತ್ತಲ್ಲ, ಅದು ಮನಸ್ಸು ಮತ್ತು ದೇಹವನ್ನು ಜೋಡಿಸುವ ಕಲೆ. ಪ್ರತಿ ವಿದ್ಯಾರ್ಥಿಯೂ ದಿನನಿತ್ಯಯೋಗಾಭ್ಯಾಸ ಮಾಡಬೇಕು ಎಂದು ಹೇಳಿದರು.
ಶಿಕ್ಷಕ ಶೃಂಗೇಶ್ವರ್ ಸೇರಿದಂತೆ ಕೆಪಿಎಸ್ ಪ್ರೌಢಶಾಲೆಯ ಶಿಕ್ಷಕ ವೃಂದ ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.