ಕಡೂರಿನ ಕಾನಗೊಂಡನಹಳ್ಳಿ ಸರ್ಕಾರಿ ಶಾಲೆ ಮಕ್ಕಳಿಗೆ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜು ಸೇವಾಪುರ ತಟ್ಟೆ, ಲೋಟಗಳನ್ನು ವಿತರಿಸಿದರು. ನಾಗರಾಜ್, ಶಿಲ್ಪಾ, ತ್ರೀವೇಣಿ ಮತ್ತಿತರರಿದ್ದರು.
ಕಡೂರು: ಯುವ ಜನರು ಶಿಕ್ಷಣದ ಜತೆಗೆ ಶಿಸ್ತು, ನೈತಿಕ ಮೌಲ್ಯ ಮತ್ತು ಸಾಮಾಜಿಕ ಜವಾಬ್ದಾರಿ ಬೆಳೆಸಿಕೊಳ್ಳಬೇಕು ಎಂದು ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜು ಸೇವಾಪುರ ತಿಳಿಸಿದರು.
ಕಾನಗೊಂಡನಹಳ್ಳಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಮಕ್ಕಳಿಗೆ ಪಠ್ಯಸಾಮಗ್ರಿಗಳನ್ನು ವಿತರಿಸಿ ಮಾತನಾಡಿ, ಸರ್ಕಾರ ಮಕ್ಕಳ ಶಿಕ್ಷಣಕ್ಕೆ ಹಲವಾರು ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದೆ. ಇವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದಾಗ ಶಾಲೆ ಮತ್ತು ಪಾಲಕರ ಕೀರ್ತಿ ಹೆಚ್ಚುತ್ತದೆ. ಸರ್ಕಾರಿ ಶಾಲೆಗಳ ಬೆಳವಣಿಗೆಗೆ ದಾನಿಗಳ ನೆರವು ಹೆಚ್ಚು ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಶಾಲೆ ಮಕ್ಕಳಿಗೆ ಪಠ್ಯಸಾಮಗ್ರಿ ನೀಡುವ ಮೂಲಕ ಶೈಕ್ಷಣಿಕವಾಗಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು. ಸರ್ಕಾರಿ ಶಾಲೆ ಮಕ್ಕಳಿಗೆ ತಟ್ಟೆ, ಲೋಟಗಳನ್ನು ವಿತರಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷೆ ಶಿಲ್ಪಾ, ಮುಖ್ಯಶಿಕ್ಷಕಿ ತ್ರೀವೇಣಿ, ಗ್ರಾಪಂ ಮಾಜಿ ಅಧ್ಯಕ್ಷೆ ಸುಧಾ ಲೇಪಾಕ್ಷಿ, ಮುಖಂಡರಾದ ಧನಪಾಲ್ ನಾಯ್ಕ್, ಮಿಥುನ್, ರಾಜಣ್ಣ, ಶ್ರೀನಿವಾಸ್, ರಾಜಭೋವಿ, ರೇವಣ್ಣ, ಶಿಕ್ಷಕರಾದ ಸತೀಶ್, ಸಹನಾ ಹಾಗೂ ಗ್ರಾಮಸ್ಥರು ಇದ್ದರು.