ಬನ್ನೂರು ಜಕ್ಕಣಕ್ಕಿ ಗ್ರಾಮದಲ್ಲಿ ಅಡಿಕೆ ಕಳವು ಮಾಡಿದ ಆರೋಪಿಗಳನ್ನು ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.
ಬಾಳೆಹೊನ್ನೂರು: ಬನ್ನೂರು ಗ್ರಾಮದ ಜಕ್ಕಣಕ್ಕಿಯಲ್ಲಿ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆ ಕಳವು ನಡೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಾಲು ಸಮೇತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೂಡಿಗೆರೆ ತಾಲೂಕಿನ ದಾರದಹಳ್ಳಿಯ ಎಸ್.ಮಂಜು, ಇಂದಿರಾನಗರ ಬಿಳುಗುಳ ಗ್ರಾಮದ ಸಂತೋಷ ಬಂಧಿತ ಆರೋಪಿಗಳು. ಬನ್ನೂರು ಜಕ್ಕಣಕ್ಕಿ ಗ್ರಾಮದ ಕೆ.ಪ್ರಸಾದ್ ಮೂರ್ತಿ ಎಂಬುವರ ಗೋದಾಮಿನಲ್ಲಿ ಕಳೆದ ಸಾಲಿನಲ್ಲಿ ಕೊಯ್ಲು ಮಾಡಿ ಒಣಗಿಸಿ ಇಟ್ಟಿದ್ದ 149 ಚೀಲಗಳ ಅಡಕೆ ಮೂಟೆಗಳ ಪೈಕಿ 7 ಮೂಟೆಗಳು ಕಳ್ಳತನವಾಗಿತ್ತು. ಆರೋಪಿಗಳು ಕಳವು ಮಾಡಿದ ಅಡಿಕೆಯನ್ನು ಶಿವಮೊಗ್ಗದ ಮಂಡಿಯೊಂದಕ್ಕೆ ಮಾರಾಟ ಮಾಡಿದ್ದರು. ರೂ.2.70 ಲಕ್ಷ ಮೌಲ್ಯದ 10 ಚೀಲ ಅಡಕೆ ಹಾಗೂ ಕೃತ್ಯಕ್ಕೆ ಬಳಸಿದ್ದ ಗೂಡ್ಸ್ ವಾಹನ, ಕಾರನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕಾರ್ಯಚರಣೆಯಲ್ಲಿ ಎಸ್‌ಪಿ ಜಿತೇಂದ್ರಕುಮಾರ್ ದಯಾಮ, ಎಎಸ್ಪಿ ಸಿ.ಟಿ.ಜಯಕುಮಾರ್, ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್, ಸಿಪಿಐ ಗುರುದತ್ ಕಾಮತ್ ಮಾರ್ಗದರ್ಶನದಲ್ಲಿ ಪಿಎಸ್‌ಐ ಅಂಬರೀಶ್, ಸಿಬ್ಬಂದಿ ಶಂಕರ್, ಎಂ.ಬಿ.ಶಂಕರಪ್ಪ, ಮನು, ಭೀಮಸೇನ್, ಗಿರೀಶ್‌ಕುಮಾರ್, ಕಾರ್ತಿಕ್, ಕೆ.ರಘು, ಆನಂದ ಬಿರಾದಾರ್, ಕಿರಣ್‌ಕುಮಾರ್, ಮಂಜುನಾಥ ಬರಿಗಾಲ್. ಚನ್ನಯ್ಯ ಇದ್ದರು.