ಎನ್.ಆರ್.ಪುರ ತಾಪಂನಲ್ಲಿ ಬೇಸಿಗೆ ಬೆಸುಗೆ ಶಿಬಿರದಲ್ಲಿ ಪ್ರಥಮ ಸ್ಥಾನ ಪಡೆದ ಕರ್ಕೇಶ್ವರ ಗ್ರಾಪಂಗೆ ತಾಪಂ ಇಒ ಎಚ್.ಡಿ.ನವೀನ್‌ಕುಮಾರ್ ಪ್ರಶಂಸನಾ ಪತ್ರ ವಿತರಿಸಿದರು. ಯಾದವರಾಜ್, ಎನ್.ಎಲ್.ಮನೀಶ, ಮಂಜುಳಾ, ಕೆ.ಡಿ.ಜೋಸೆಫ್ ಇತರರಿದ್ದರು. 
ಚಿಕ್ಕಮಗಳೂರು

ಬೇಸಿಗೆ-ಬೆಸುಗೆ ಶಿಬಿರ ಪರಿಣಾಮಕಾರಿ

ಎಸ್.ಎನ್.ರವೀಂದ್ರ

ಪ್ರಮುಖ ಮುಖ್ಯಾಂಶಗಳು

  • ಮೂರೂ ಸ್ಥಾನ ಪಡೆದ ಗ್ರಾಪಂಗಳು
  • ತೃತೀಯ ಸ್ಥಾನಗಳನ್ನು ನೀಡಲಾಗಿದೆ.
ಎನ್.ಆರ್.ಪುರ: ಜಿಲ್ಲಾ ಪಂಚಾಯಿತಿ ಸಿಇಒ ಮಾರ್ಗದರ್ಶನದಲ್ಲಿ ತಾಲೂಕಿನ ಗ್ರಂಥಾಲಯಗಳಲ್ಲಿ ಆಯೋಜಿಸಿದ್ದ ಬೇಸಿಗೆ-ಬೆಸುಗೆ ಶಿಬಿರ ಪರಿಣಾಮಕಾರಿಯಾಗಿ ನಡೆಯಿತು ಎಂದು ತಾಪಂ ಇಒ ಎಚ್.ಡಿ.ನವೀನ್‌ಕುಮಾರ್ ಹೇಳಿದರು.
ತಾಪಂನಲ್ಲಿ ಬೇಸಿಗೆ-ಬೆಸುಗೆ ಶಿಬಿರ ಆಯೋಜಿಸಿದ್ದ ಗ್ರಾಪಂಗಳಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಬೇಸಿಗೆ- ಬೆಸುಗೆ ಮೂಲಕ ಮಕ್ಕಳು ಮೊಬೈಲ್, ಟಿ.ವಿಗಳಿಂದ ದೂರ ಉಳಿದು, ಗ್ರಂಥಾಲಯಗಳಲ್ಲಿ ಆಯೋಜಿಸುತ್ತಿದ್ದ ಇತರ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ. ಶಿಬಿರ ಉಪಯುಕ್ತವಾಗಿದ್ದು, ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗಿದೆ ಎಂದರು.
ಶಿಬಿರ ಆಯೋಜಿದ್ದ ಗ್ರಾಮ ಪಂಚಾಯಿತಿಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ನೀಡಲಾಗಿದೆ. ಮೂರೂ ಸ್ಥಾನ ಪಡೆದ ಗ್ರಾಪಂಗಳು ಶಿಬಿರದಲ್ಲಿ ಆಯೋಜಿಸಿದ್ದ ವಿಶೇಷ ಚಟುವಟಿಕೆಗಳ ಸಂಪೂರ್ಣ ಛಾಯಾಚಿತ್ರ, ವಿಡಿಯೋಗಳನ್ನು ಜಿಲ್ಲಾ ಮಟ್ಟಕ್ಕೆ ಸಲ್ಲಿಸಲಾಗುವುದು. ಪಿಡಿಒ, ಗ್ರಂಥಾಲಯಗಳ ಮೇಲ್ವಿಚಾರಕರ ಸಹಕಾರದಿಂದ ಶಿಬಿರ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಶಿಬಿರಗಳನ್ನು ಆಯೋಜಿಸಲಾಗುವುದು ಎಂದರು.
ಅತ್ಯುತ್ತಮವಾಗಿ ಶಿಬಿರ ಆಯೋಜಿಸಿದ್ದ ಕರ್ಕೇಶ್ವರ ಗ್ರಾಪಂ ಪ್ರಥಮ ಸ್ಥಾನ, ಬಿ.ಕಣಬೂರು ದ್ವಿತೀಯ ಸ್ಥಾನ ಹಾಗೂ ಆಡುವಳ್ಳಿ ಗ್ರಾಪಂ ತೃತೀಯ ಸ್ಥಾನ ಪಡೆದವು. ಮೂರೂ ಗ್ರಾಪಂಗಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಶಂಸನಾ ಪತ್ರ ವಿತರಿಸಲಾಯಿತು. ಉಳಿದ 11 ಗ್ರಾಪಂಗಳಿಗೆ ಪ್ರಶಂಸನಾ ಪತ್ರಗಳನ್ನು ವಿತರಿಸಲಾಯಿತು. 
 ತಾಲೂಕು ಯೋಜನಾ ಅಧಿಕಾರಿ ಯಾದವರಾಜ್, ಸಹಾಯಕ ನಿರ್ದೇಶಕರಾದ ಎನ್.ಎಲ್.ಮನೀಶ, ಮಂಜುಳಾ, ತಾಲೂಕಿನ ಎಲ್ಲ ಪಿಡಿಗಳು ಹಾಗೂ ಗ್ರಂಥಾಲಯಗಳ ಮೇಲ್ವಿಚಾರಕರು ಇದ್ದರು.