ಬಾಳೆಹೊನ್ನೂರಿನ ಬಿ.ಕಣಬೂರು ಗ್ರಾಪಂನಲ್ಲಿ ಆಯೋಜಿಸಿದ್ದ ಬೇಸಿಗೆ ಬೆಸುಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸುಚಿತಾ ಉಚಿತ್ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಡಾ.ಪ್ರೀತಮ್, ಕಾಶಪ್ಪ, ಸನತ್‌ಶೆಟ್ಟಿ, ಸುಧಾಕರ್, ಶಾಫಿ ಇದ್ದರು.  
ಚಿಕ್ಕಮಗಳೂರು

ರಜೆಯಲ್ಲಿ ಮಕ್ಕಳಿಗೆ ಹೊಸ ಅನುಭವ ಕಲಿಸಿದ ಬೇಸಿಗೆ ಶಿಬಿರ

ಬಾಳೆಹೊನ್ನೂರು: ಸರ್ಕಾರ ಆಯೋಜಿಸಿರುವ ಬೇಸಿಗೆ ಬೆಸುಗೆ ಶಿಬಿರದಿಂದ ಮಕ್ಕಳಿಗೆ ಹಲವು ಅನುಭವಗಳು ದೊರೆತಿದೆ ಎಂದು ಬಿ.ಕಣಬೂರು ಗ್ರಾಪಂ ಆಡಳಿತಾಧಿಕಾರಿ ಡಾ.ಪ್ರೀತಮ್ ಹೇಳಿದರು.
ಬಿ.ಕಣಬೂರು ಗ್ರಾಪಂನ ಡಿಜಿಟಲ್ ಗ್ರಂಥಾಲಯ ಮತ್ತು ಅರಿವು ಕೇಂದ್ರದಲ್ಲಿ ನಡೆದ ಬೇಸಿಗೆ ಬೆಸುಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಸರ್ಕಾರ ಮಕ್ಕಳಿಗಾಗಿ ಬೇಸಿಗೆ ಬೆಸುಗೆ ಶಿಬಿರ ಆರಂಭಿಸಿರುವುದು ಉತ್ತಮವಾಗಿದೆ. ಗ್ರಂಥಾಲಯ, ಅರಿವು ಕೇಂದ್ರಗಳಲ್ಲಿ ಇದನ್ನು ಆಯೋಜಿಸಿರುವುದರಿಂದ ಮಕ್ಕಳಿಗೆ ಒಳ್ಳೆಯ ಜ್ಞಾನಾರ್ಜನೆಯಾಗಲಿದೆ ಎಂದರು.
ಗ್ರಾಪಂ ಪಿಡಿಓ ಕಾಶಪ್ಪ ಮಾತನಾಡಿ, ಬೇಸಿಗೆ ರಜೆ ಸಂದರ್ಭದಲ್ಲಿ ಮಕ್ಕಳು ಮನೆಯಲ್ಲಿದ್ದಾಗ ಯಾವುದೇ ಅವಘಡಗಳು ಸಂಭವಿಸುವ ಸಾಧ್ಯತೆಯಿರುತ್ತದೆ. ಇದನ್ನು ಮನಗಂಡು ಮಕ್ಕಳ ಸುರಕ್ಷತೆಯಾಗಿ ಬೇಸಿಗೆ ಬೆಸುಗೆ ಶಿಬಿರ ಆಯೋಜಿಸಿದ್ದು, ಮಕ್ಕಳು ಹಲವರೊಂದಿಗೆ ಬೆರೆತು ವಿವಿಧ ವಿಚಾರಗಳನ್ನು ಕಲಿಯುವುದರೊಂದಿಗೆ ಮೌಲ್ಯಯುತ ಶಿಕ್ಷಣ ಪಡೆಯಲಿದ್ದಾರೆ ಎಂದರು.
ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೆ ಜೇಸಿಐನಿಂಧ ಕುಡಿಯುವ ನೀರಿನ ಸ್ಟೀಲ್ ಬಾಟಲಿಗಳನ್ನು ಕೊಡುಗೆಯಾಗಿ ನೀಡಲಾಯಿತು. ಇನ್ನರ್‌ವ್ಹೀಲ್ ಕ್ಲಬ್ ಮಾಜಿ ಅಧ್ಯಕ್ಷೆ ಸುಚಿತಾ ಉಚಿತ್ ಹೆಗ್ಡೆ, ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀ, ಜೇಸಿಐ ಮಾಜಿ ಅಧ್ಯಕ್ಷ ಸುಧಾಕರ್, ಇಬ್ರಾಹಿಂ ಶಾಫಿ, ಗ್ರಾಪಂ ಮಾಜಿ ಅಧ್ಯಕ್ಷರಾದ ಮಹಮ್ಮದ್ ಜುಹೇಬ್, ಎಂ.ಜೆ.ಮಹೇಶ್ ಆಚಾರ್ಯ, ಜಾನಕಿ, ಸದಾಶಿವ ಆಚಾರ್ಯ ಮತ್ತಿತರರು ಇದ್ದರು.