ಅನೂಪ್ ಶೆಟ್ಟಿ. 
ಚಿಕ್ಕಮಗಳೂರು

25ಕ್ಕೆ ಮೂಡಿಗೆರೆಯಲ್ಲಿ ರಾಜ್ಯ ಮಟ್ಟದ ಡರ್ಟ್‌ಟ್ರಾಕ್ ಸ್ಪರ್ಧೆ

ಮೂಡಿಗೆರೆ: ಛತ್ರಮೈಧಾನ ಬಡಾವಣೆ ಸಮೀಪದ ಗದ್ದೆಯಲ್ಲಿ 25, 26 ರಂದು ಬೈಕ್ ಮತ್ತು ಕಾರುಗಳ ಡರ್ಟ್ ಟ್ರಾಕ್ ರ‌್ಯಾಲಿ ಏರ್ಪಡಿಸಲಾಗಿದೆ ಎಂದು ಆಯೋಜಕ ಅನೂಪ್ ವಿ.ಶೆಟ್ಟಿ ಹೇಳಿದರು.
ಮೊದಲ ದಿನ 25 ರಂದು ಬೈಕ್ ರ‌್ಯಾಲಿ ನಡೆಯಲಿದೆ. ಇದರಲ್ಲಿ 2 ಮತ್ತು 4 ಸ್ಟೋಕ್ ಎಕ್ಸ್‌ಪೋರ್ಟ್ ಮತ್ತು ಬಿಗಿನಿಯರ್ಸ್ ನೋಯ್ಸ್-1 ಇಂಡಿಯನ್ ಓಪನ್ ಮತ್ತು ಬುಲೆಟ್ ಕ್ಲಾಸಿಕ್ ಇನ್ಸಟೇಷನ್ ಕ್ಲಾಸ್‌ನಲ್ಲಿ ಸ್ಟಾರ್ ಆಫ್ ಚಿಕ್ಕಮಗಳೂರು, ಬೆಸ್ ರೈಡರ್, ಕಿಡ್ಸ್ ಕ್ಲಾಸಸ್, ಮೊಪೆಡ್ ಕ್ಲಾಸಸ್ ವಿಭಾಗದ ಸ್ಪರ್ಧೆ ನಡೆಯಲಿದೆ. ಕಾರುಗಳ ವಿಭಾಗದಲ್ಲಿ 800 ರಿಂದ 2000 ಸಿಸಿ ವರೆಗೆ ಇಂಡಿಯನ್ ಓಪನ್ ಲೇಡಿಸ್ ಕ್ಲಾಸ್, ನೋಯ್ಸ್ ಓಪನ್ ಕ್ಲಾಸ್ ನಡೆಯಲಿದೆ. ಇಂಟರ್ ನ್ಯಾಷನಲ್ ಕ್ಲಾಸ್‌ನಲ್ಲಿ ಓಲ್ಡ್ ಮಾಸ್ಟರ್, ಫಾಸ್ಟೆಸ್ಟ್ ಡ್ರೈವ್, ಸ್ಟಾರ್ ಆಫ್ ಚಿಕ್ಕಮಗಳೂರು, ಡೀಸೆಲ್ ಓಪನ್ ಕ್ಲಾಸ್, ಸ್ಟ್ರೀಟ್ ಸ್ಟೋಕ್ ಸ್ಪರ್ಧೆಗಳು ನಡೆಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫಾಸ್ಟೆಸ್ಟ್ ಡ್ರೈವರ್ ವಿಭಾಗದಲ್ಲಿ 25 ಸಾವಿರ ರೂ. ನಗದು ಮತ್ತು ಟ್ರೋಫಿ, ಫಾಸ್ಟೆಸ್ಟ್ ರೈಡರ್ ವಿಭಾಗದಲ್ಲಿ 15 ಸಾವಿರ ರೂ. ಮತ್ತು ಟ್ರೋಫಿ ಬಹುಮಾನವಿದೆ. ಪ್ರಥಮ ಸ್ಥಾನ ಪಡೆದವರಿಗೆ 12 ಸಾವಿರ ರೂ. ದ್ವಿತೀಯ 8 ಸಾವಿರ ರೂ. ತೃತೀಯ 4 ಸಾವಿರ ರೂ. ಬಹುಮಾನ ನೀಡಲಾಗುತ್ತದೆ. ಬೆಂಗಳೂರು, ಮೈಸೂರು, ಮಂಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ 200ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸುಪ್ರಿತ್‌ಶೆಟ್ಟಿ, ಆಕರ್ಷ್, ಅಭಿಷೇಕ್ ಇದ್ದರು.