ಬೀರೂರಿನ ರಂಭಾಪುರಿ ಖಾಸಾಶಾಖಾ ಮಠದಲ್ಲಿ ಭಾನುವಾರ ಸಂಜೆ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಶ್ರೀ ಶೈಲ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದರು . 
ಚಿಕ್ಕಮಗಳೂರು

ಬೀರೂರಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ಕಲ್ಯಾಣೋತ್ಸವ 19ಕ್ಕೆ

ಬೀರೂರು: ಪಟ್ಟಣದಲ್ಲಿ ಮೇ 19, 20 ರಂದು ಶ್ರೀ ಭ್ರಮರಾಂಬ ಸಹಿತ ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ಕಲ್ಯಾಣೋತ್ಸವ ಹಾಗೂ ಶ್ರೀಶೈಲ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜೆ ಕಾರ್ಯಕ್ರಮ ನಡೆಯಲಿದೆ ಎಂದು ಬೀರೂರಿನ ರಂಭಾಪುರಿ ಖಾಸಾಶಾಖಾ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ರಂಭಾಪುರಿ ಖಾಸಾ ಶಾಖಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಮಸ್ತ ನಾಡಿಗೆ ಮಳೆ, ಬೆಳೆ ಮತ್ತು ಮನುಕುಲಕ್ಕೆ ಯಶಸ್ಸಿಗಾಗಿ19ರಂದು ಶ್ರೀ ಶೈಲ ಜಗದ್ಗುರುಗಳು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನಡೆಸಲಿದ್ದಾರೆ. ಸಂಜೆ ಶ್ರೀ ಭ್ರಮರಾಂಬ ಸಹಿತ ಶ್ರೀ ಶೀಶೈಲ ಮಲ್ಲಿಕಾರ್ಜುನ ಸ್ವಾಮಿಯ ಪುರ ಪ್ರವೇಶ, ಧರ್ಮಸಭೆ ರಾತ್ರಿ ಪ್ರಸಾದ ವಿನಿಯೋಗ ನಡೆಯಲಿದೆ.
20ರಂದು ಬೆಳಗ್ಗೆ ಶ್ರೀಶೈಲ ಪೀಠದಿಂದ ಆಗಮಿಸುವ ರಥದಲ್ಲಿ ಶ್ರೀ ಭ್ರಮರಾಂಬ ಸಹಿತ ಶ್ರೀ ಶೀಶೈಲ ಮಲ್ಲಿಕಾರ್ಜುನ ಸ್ವಾಮೀಜಿ ಅವರ ರಾಜ ಬೀದಿಗಳಲ್ಲಿ ಉತ್ಸವ ನಡೆಯಲಿದೆ. ಸಂಜೆ ಡಿ.ವಿ.ಹಾಲಪ್ಪ ರಸ್ತೆಯಲ್ಲಿರುವ ಜಗದ್ಗುರು ರೇಣುಕಾಚಾರ್ಯ ಮಂಗಲ ಮಂದಿರದಲ್ಲಿ ಕಲ್ಯಾಣೋತ್ಸವ ನಡೆಯಲಿದೆ. ಸನಾತನ ಪರಂಪರೆ ಉಳಿಸಲು ಮತ್ತು ಸಮಾಜದ ಒಳಿತಿಗಾಗಿ, ಯುವ ಜನತೆಗೆ ಕೌಟುಂಬಿಕ ಸಂಸ್ಕಾರ ದೊರೆಯುವ ಸಲುವಾಗಿ ಮೊದಲ ಬಾರಿಗೆ ಬೀರೂರು ಪಟ್ಟಣದಲ್ಲಿ ಶ್ರೀ ಶೈಲ ಪೀಠದ ಕುಲಪುರೋಹಿತರ ನೇತೃತ್ವದಲ್ಲಿ ಈ ಧರ್ಮ ಕಾರ್ಯಗಳು ನಡೆಯಲಿದೆ ಎಂದು ತಿಳಿಸಿದರು.
ಜೆ.ಪಿ.ನವೀನ್, ಕುಮಾರ ಶಾಸ್ತ್ರಿ, ರುದ್ರೇಶ್ ಇದ್ದರು.