ಎನ್.ಆರ್.ಪುರ ಅಗ್ರಹಾರದ ಗಾಯತ್ರಿ ದೇವಸ್ಥಾನದಲ್ಲಿ ದ್ವಿತೀಯ ವರ್ಷದ ಪ್ರತಿಷ್ಠಾ ವರ್ಧಂತ್ಯೋತ್ಸವ ಅಂಗವಾಗಿ ವಿಪ್ರ ಬಂಧುಗಳಿಂದ ಲಕ್ಷ ಗಾಯತ್ರಿ ಜಪ ನಡೆಯಿತು.
ಎನ್.ಆರ್.ಪುರ: ಅಗ್ರಹಾರದ ಗಾಯತ್ರಿ ದೇವಸ್ಥಾನದಲ್ಲಿ ದ್ವಿತೀಯ ವರ್ಷದ ಪ್ರತಿಷ್ಠಾ ವರ್ಧಂತ್ಯೋತ್ಸವ ಅಂಗವಾಗಿ ಗಾಯಿತ್ರಿ ದೇವಿ ಸೇವಾ ಸಮಿತಿ ಮತ್ತು ತಾಲೂಕು ಬ್ರಾಹ್ಮಣ ಮಹಾಸಭಾಯಿಂದ ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಭಾನುವಾರ ಬೆಳಗ್ಗೆಯಿಂದ ಸಂಜೆಯವರೆಗೆ ವಿಪ್ರಬಂಧುಗಳಿಂದ ಲಕ್ಷ ಗಾಯತ್ರಿ ಜಪ ನಡೆಯಿತು. ಸಂಜೆ ಅಗ್ರಹಾರದ ಮಹಿಳೆಯರಿಂದ ಶ್ರೀ ಲಲಿತಾ ಸಹಸ್ರನಾಮ ಕುಂಕುಮಾರ್ಚನೆ ನಡೆಯಿತು. ಸೋಮವಾರ ಬೆಳಗ್ಗೆ ಶಾಕಲ ಋಗ್ವೇದ ಸಂಹಿತಾ ಪಾರಾಯಣ ನಡೆಯಿತು. ನಂತರ ಗಾಯತ್ರಿ ದೇವಿಗೆ ಅಭಿಮಂತ್ರಿತ ಕಲಶಾಭಿಷೇಕ, ಮಧ್ಯಾಹ್ನ ಶ್ರೀ ಗಾಯತ್ರಿ ಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ ಜರುಗಿತು. ನೂರಾರು ಭಕ್ತರು ಪಾಲ್ಗೊಂಡಿದ್ದರು.