ಎನ್.ಆರ್.ಪುರದ ನಾಗಲಾಪುರ ಗ್ರಾಪಂನಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಬಗ್ಗೆ ಅರಿವು ಮೂಡಿಸಲಾಯಿತು. ಪ್ರೇಮಕುಮಾರ್,ಲತಾ, ಪ್ರಸನ್ನ, ಪೂರ್ಣಿಮಾ, ಅನ್ನಮ್ಮ, ಜಯಕುಮಾರ ಇದ್ದರು. 
ಚಿಕ್ಕಮಗಳೂರು

ನಾಗಲಾಪುರದಲ್ಲಿ ಎಸ್‌ಆರ್‌ಐ ಅರಿವು ಜಾಥಾ

ಎನ್.ಆರ್.ಪುರ: ಯಾವುದೇ ಅರ್ಹ ಮತದಾರರು ಮತದಾನದಿಂದ ಹೊರಗುಳಿಯ ಬಾರದು ಎಂದು ನಾಗಲಾಪುರ ಗ್ರಾಪಂ ಪಿಡಿಒ ಪ್ರೇಮಕುಮಾರ್ ತಿಳಿಸಿದರು.
ತಾಲೂಕಿನ ನಾಗಲಾಪುರ ಗ್ರಾಪಂನಿಂದ ಆಯೋಜಿಸಿದ್ದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸುವ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿ, ಚುನಾವಣಾ ಆಯೋಗ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026 ಅನ್ನು ಘೋಷಣೆ ಮಾಡಿದ್ದು, ಗಣತಿಗೆ ಅನುಗುಣವಾಗಿ ಅರ್ಹ ಯುವ ಮತದಾರರು, ವಿಶೇಷ ಚೇತನರು ಮತದಾನದಿಂದ ಹೊರಗುಳಿಯಬಾರದು ಎಂದು ಜಿಪಂ ಸಿಇಒ ಹಾಗೂ ತಾಪಂ ಇಒ ಮಾರ್ಗದರ್ಶನದಲ್ಲಿ ಸಮಗ್ರ ಜಾಗೃತಿ ಅಭಿಯಾನದ ಮೂಲಕ ವಿವಿಧ ರೀತಿಯ ಜಾಗೃತಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು, ಮತದಾರರಲ್ಲಿ ಎಸ್‌ಐಆರ್ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಮತದಾರರು ಎಸ್‌ಐಆರ್ ಕಾರ್ಯದಲ್ಲಿ ಕಾರ್ಯದಲ್ಲಿ ಬಿಎಲ್‌ಒ ಅವರೊಂದಿಗೆ ಸಹಕರಿಸಬೇಕು. ತಮ್ಮ ಮಾಹಿತಿಯು ಬಿಎಲ್‌ಒ ಅವರು ನೀಡಿದ ನಮೂನೆಯಲ್ಲಿ ಸರಿಯಾಗಿದೆಯೇ ಎಂದು ಪರಿಶೀಲಿಸಬೇಕು. ಇದು ಪ್ರತಿಯೊಬ್ಬ ಮತದಾರನ ಕರ್ತವ್ಯ ಎಂದರು.
ಬಸ್ತಿಮಠದಿಂದ ಸುಂಕದಕಟ್ಟೆವರೆಗೆ ಶಾಲಾ, ಕಾಲೇಜುಗಳ ಮಕ್ಕಳೊಂದಿಗೆ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಘೋಷಣೆಗಳನ್ನು ಕೂಗುತ್ತಾ, ಮತದಾರರಲ್ಲಿ ಅರಿವು ಮೂಡಿಸಲಾಯಿತು.
ಶ್ರೀಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆ ಶಿಕ್ಷಕರಾದ ಸುಜಾತಾ ಕುಮಾರಿ, ಶಾರದಾ, ಅಜಿತ, ನಿಶ್ಚಿತ, ಪಿ.ಸುರೇಶ್, ಗುಣಪಾಲ್‌ಜೈನ್ ಲತಾ, ಪ್ರಸನ್ನ, ಪೂರ್ಣಿಮಾ, ಅನ್ನಮ್ಮ, ಜಯಕುಮಾರ ಇದ್ದರು.